ಆರೋಗ್ಯ ಉಚಿತ ತಪಾಸಣಾ ಶಿಬಿರ

blank

ನಾಪೋಕ್ಲು: ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತಿ ಮುಖ್ಯ ಎಂದು ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ ಹೇಳಿದರು.

ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಮಹಿಳಾ ಘಟಕ, ಮಡಿಕೇರಿಯ ಇನ್ನರ್ ವೀಲ್ ಕ್ಲಬ್ ಮತ್ತು ಆಯುಷ್ ಇಲಾಖೆ ಸಹಯೋಗದಲ್ಲಿ ಸಮೀಪದ ಬಲ್ಲಮಾವಟಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಅದರಲ್ಲೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರಬೇಕು. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಮಹಿಳಾ ಘಟಕವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಅಂಗವಾಗಿ ಗ್ರಾಮೀಣ ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಭಾಬಿ ಭೀಮಯ್ಯ, ಪಿಡಿಒ ಶರತ್ ಪೂಣಚ್ಚ, ಇನ್ನರ್ ವೀಲ್ ಅಧ್ಯಕ್ಷೆ ಆಗ್ನೆಸ್ ಮುತ್ತಣ್ಣ ಉಪಸ್ಥಿತರಿದ್ದರು.

ಸಂಘಟನೆಯ ಮಹಿಳಾ ಘಟಕದ ಕಾರ್ಯದರ್ಶಿ ಡಾ.ಸೌಮ್ಯಾ ಗಣರಾಜ್, ಸದಸ್ಯರಾದ ಡಾ.ಕೆ.ಈಶ್ವರಿ, ಡಾ.ಸಾವಿತ್ರಿ ರಾಜಗೋಪಾಲ್, ಡಾ.ಹಿನಾ, ಡಾ.ಅದಿತಿ, ನೇತ್ರ ತಜ್ಞೆ ವಿಜಯಲಕ್ಷ್ಮೀ ಚೇತನ್, ಡಾ.ಮಿಲನಾ, ಇನ್ನರ್ ವೀಲ್ ಕಾರ್ಯದರ್ಶಿ ರಶ್ಮಿ ಪ್ರವೀಣ್, ಸದಸ್ಯರು, ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಗ್ರಾಮದ 52 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

 

 

Share This Article

ಮಗು ಜನಿಸಿದ ಎಷ್ಟು ತಿಂಗಳ ಬಳಿಕ ಉಪ್ಪಿನ ಆಹಾರ ನೀಡಬೇಕು?; ತಜ್ಞರು ಹೇಳೊದೇನು? | Salty Food

Salty Food : ಹುಟ್ಟಿದ ಮಗುವನ್ನು ದೊಡ್ಡದಾಗಿ ಬೆಳೆಯುವವರಿಗೂ ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬಟ್ಟೆ…

ಸನ್‌ಸ್ಕ್ರೀನ್, ಸೀರಮ್‌ಗಳನ್ನು ಬಳಸುತ್ತೀರಾ? ಹಾಗಿದ್ರೆ ಕ್ಯಾನ್ಸರ್​​ ಬರಬಹುದು ಎಚ್ಚರ! Glow Skin

Glow Skin | ನಮ್ಮ ಸ್ಕಿನ್​ ಗ್ಲೋ ಆಗಿ ಕಾಣಬೇಕೆಂದು ಮಹಿಳೆಯರು ಮಾಡುವ ಪ್ರಯತ್ನ ಒಂದೆರಡಲ್ಲ.…

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಕಾಲಿನಿಂದ ತುಳಿಯಬೇಡಿ!  ನೀವು ಖಂಡಿತವಾಗಿಯೂ ಆರ್ಥಿಕ ತೊಂದರೆಗೆ ಸಿಲುಕುವಿರಿ.. Vasthu Tips

Vasthu Tips: ಹಿರಿಯರು ಹೇಳಿದ್ದನ್ನು  ಅನೇಕ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವು ಕೆಲವು ವಸ್ತುಗಳನ್ನು ದೇವರು…