ಕಲಬುರಗಿ : ಜಿಡಗಾದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಜಯಂತೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ೯:೩೦ ಗಂಟೆಗೆ ನಗರದ ಉದನೂರ ರಸ್ತೆಯಲ್ಲಿರುವ ಅಪ್ಪಾಜಿ ಗುರುಕುಲ ಶಾಲೆಯಲ್ಲಿ ಆವರಣದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ರಾಜಮಾರ್ಗ ಚಾರಿಟೇಬಲï ಟ್ರಸ್ಟ್ ಮತ್ತು ಅಪ್ಪಾಜಿ ಶಿP್ಷÀಣ ಟ್ರಸ್ಟ್ ಹಾಗೂ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರವನ್ನು ಕಾಂಗ್ರೆಸ್ ಮುಖಂಡ ಸಂತೋಷ ಬಿಲಗುಂದಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ನೇತ್ರ ತಜ್ಞರಾದ ಡಾ.ವಿಶ್ವನಾಥ ರಡ್ಡಿ, ಡಾ.ರಾಜೇಶ್ವರಿ ರಡ್ಡಿ ಅವರು ಮುಖ್ಯ ಅತಿಥಿಗಳಾಗಿ ನೇತ್ರ ಸಪಾಸಣೆ ನಡೆಸುವರು. ಮುಖಂಡರಾದ ನೀಲಕಂಠರಾವ ಪೊಲೀಸ್ ಪಾಟೀಲï, ಶಿವಲಿಂಗಯ್ಯ ಮಠಪತಿ ಇತರರು ಉಪಸ್ಥಿತರಿರುವರು. ಉದನೂರ ಹಾಗೂ ಸುತ್ತಲಿನ ಬಡಾವಣೆಯ ಜನರು ಶಿಬಿರದ ಲಾಭ ಪಡೆದುಕೊಳ್ಳುವಂತೆ ಅಧ್ಯಕ್ಷೆ ಭಾಗ್ಯಮ್ಮ ರಾಜಕುಮಾರ ಬಿರಾದಾರ ಮತ್ತು ಕಾರ್ಯದರ್ಶಿ ರಾಜಕುಮಾರ ಉದನೂರ ತಿಳಿಸಿದ್ಧಾರೆ.
====