ಕುಂದಾಪುರ: ಕುಂದಾಪುರ ನಗರ, ಸಂಚಾರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರಸಾದ ನೇತ್ರಾಲಯ, ಕುಂದಾಪುರ ರೋಟರಿ ಕ್ಲಬ್ ಸಹಕಾರದಿಂದ ಕುಂದಾಪುರದ ಶಾಲಾ-ಕಾಲೇಜುಗಳ ವಾಹನ ಚಾಲಕರು, ಆಟೋರಿಕ್ಷಾ ಚಾಲಕರು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರಿಗೆ ನೇತ್ರ ತಪಾಸಣೆ ಉಚಿತ ಶಿಬಿರ ಹಾಗೂ ಆರೋಗ್ಯ ತಪಾಸಣೆ ಶಿಬಿರ ಕುಂದಾಪುರದಲ್ಲಿ ಮಂಗಳವಾರ ನಡೆಯಿತು.
ಕುಂದಾಪುರ ಪೊಲೀಸ್ ಉಪವಿಭಾಗ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಖತ್ ಅಲಿ, ನೇತ್ರ ತಜ್ಞ ಡಾ.ಗುರುಪ್ರಸಾದ, ಉಪನಿರೀಕ್ಷಕರಾದ ನಂಜಾ ನಾಯ್ಕ, ಪ್ರಸಾದ ಕುಮಾರ ಉಪಸ್ಥಿತರಿದ್ದರು.