More

  ರಾಹಿ ಸಂಸ್ಥೆಯಿಂದ ಮಹಿಳಾ ಟ್ರಾನ್ಸ್‌ಜೆಂಡರ್‌ಗಾಗಿ ಉಚಿತ ವಸತಿ ವ್ಯವಸ್ಥೆ

  ಬೆಂಗಳೂರು:ಹುಟ್ಟುವಾಗ ಹೆಣ್ಣಾಗಿ ಹುಟ್ಟಿ ನಂತರ ಗಂಡಾಗಿ ಬದಲಾದ ಕ್ವೀರ್ ಮತ್ತು ಟ್ರಾನ್ಸ್‌ಮಾಸ್ಕುಲಿನ್ ಸಮುದಾಯದ ವ್ಯಕ್ತಿಗಳಿಗಾಗಿ ರಾಹಿ ಸಂಸ್ಥೆ ಅಲ್ಪವಧಿ ಆಶ್ರಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

  ಕರ್ನಾಟಕ ಮೂಲದ ರಾಹಿ ಸಂಸ್ಥೆ ಈ ಹಿಂದಿನಿಂದಲು ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಮೊದಲ ಬಾರಿಗೆ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಕ್ವೀರ್ ಮತ್ತು ಟ್ರಾನ್ಸ್‌ಮಾಸ್ಕುಲಿನ್ ಸಮುದಾಯದ ಸದಸ್ಯರು ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಂತವರಿಗಾಗಿ ಸಹಾಯ ಹಸ್ತ ಚಾಚುತ್ತಿದ್ದೇವೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿದೇಶಕಿ ಸುಚಿತ್ರ ಕೆ.ಕೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಾಕಷ್ಟು ಮಂದಿ ಕ್ವೀರ್ ಮತ್ತು ಟ್ರಾನ್ಸ್‌ಮಾಸ್ಕುಲಿನ್ ಸದಸ್ಯರಿದ್ದಾರೆ.ಜನನದ ವೇಳೆ ಹೆಣ್ಣಾದರು ನಂತರ ಗಂಡಾಗಿ ಬದಲಾಗುವ ಸಮಯದಲ್ಲಿ ತನ್ನ ಮನೆಯ ಸದಸ್ಯರಿಂದ ಮತ್ತು ಸಾರ್ವಜನಿಕ ಸಮಾಜದಲ್ಲಿ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ. ಇಂತಹ ಸಮಯದಲ್ಲಿ ಅವರಿಗೆ ಸೂಕ್ತ ಸಲಹೆ, ಸೌಕರ್ಯ, ಸೌಲಭ್ಯಗಳು ಅಗತ್ಯವಿರುತ್ತವೆ. ಆದರೆ, ಸರಿಯಾದ ಸಮಯಕ್ಕೆ ಇವೆಲ್ಲವೂ ದೊರೆಯದ ಕಾರಣ ಅವರು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

  ಸದ್ಯ ರಾಹಿ ಸಂಸ್ಥೆ ಸ್ಥಾಪಿಸಿರುವ ಆಶ್ರಯ ಕೇಂದ್ರದಲ್ಲಿ 8 ರಿಂದ 10 ಮಂದಿಗೆ ಅಲ್ಪಾವಧಿ ಆಶ್ರಯ ನೀಡಿ ಸಕಲ ಸೌಕರ್ಯಗಳನ್ನು ಒದಗಿಸಲು ಸಿದ್ದವಾಗಿದೆ. ಆಸಕ್ತ ಕ್ವೀರ್ ಮತ್ತು ಟ್ರಾನ್ಸ್‌ಮಾಸ್ಕುಲಿನ್ ಸದಸ್ಯರು 60 ದಿನಗಳವರೆಗೆ ಆಶ್ರಯ ಪಡೆಯಬಹುದು. ಊಟ ಹಾಗೂ ವಸತಿ ಎಲ್ಲವೂ ಉಚಿತವಾಗಿದ್ದು, ಮನೆ ಬಿಟ್ಟು ಬಂದಂತ ಹಾಗೂ ಹೊರರಾಜ್ಯಗಳಿಂದ ಉದ್ಯೋಗ ಹರಸಿ ಬರುವ ಕ್ವೀರ್ ಮತ್ತು ಟ್ರಾನ್ಸ್‌ಮಾಸ್ಕುಲಿನ್ ಸದಸ್ಯರು ಆಶ್ರಯ ಕೇಂದ್ರದಲ್ಲಿ ಆಶ್ರಯ ಪಡೆಯಬಹುದು. ಅಲ್ಲದೆ, ಅಂತಹ ಸದಸ್ಯರಿಗೆ ಎಲ್ಲ ರೀತಿಯ ಸಹಾಕರ ನೀಡುತ್ತದೆ ಎಂದು ಹೇಳಿದರು.

  See also  ಎಎಸ್​ಐ ಬಲಿ ಪಡೆದ ಕೋವಿಡ್-19: ಪೊಲೀಸರಲ್ಲೂ ಮಡುಗಟ್ಟಿದೆ ಆತಂಕ

  ಈ ಕುರಿತು ರಾಹಿ ಸಂಸ್ಥೆ ಜೂನ್. 29ರಂದು ರಾಮಮೂರ್ತಿನಗರದಲ್ಲಿರುವ ನಾಟ್ಯಪ್ರಿಯ ನೃತ್ಯಕ್ಷೇತ್ರ, ಸ್ಕೂಲ್ ಆ್ ರ್ಪಾರ್ಮಿಂಗ್ ಆಟ್ಸ್ ಸಂಸ್ಥೆಯಲ್ಲಿ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಸರ್ಕಾರಿ ಅಧಿಕಾರಿಗಳು, ಸಮುದಾಯದ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಮುದಾಯದ ಸದಸ್ಯರು ನಾಟಕ, ನೃತ್ಯ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts