ಪ್ರಸಕ್ತ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ಬ್ಯಾಂಕ್​ಗಳಿಗೆ 32 ಸಾವಿರ ಕೋಟಿ ರೂ. ವಂಚನೆ: ಎಸ್​ಬಿಐಗೆ ಹೆಚ್ಚಿನ ಬಿಸಿ

ಇಂದೋರ್​: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ರಾಷ್ಟ್ರದ 18 ಸಾರ್ವಜನಿಕ ವಲಯ ಬ್ಯಾಂಕ್​ಗಳಿಗೆ ಒಟ್ಟು 32 ಸಾವಿರ ಕೋಟಿ ರೂಪಾಯಿ ವಂಚಿಸಲಾಗಿದೆ. ಒಟ್ಟು 2,480 ಪ್ರಕರಣಗಳಲ್ಲಿ ಇಷ್ಟೊಂದು ವಂಚಿಸಲಾಗಿದೆ. ವಂಚನೆಗೆ ಒಳಗಾದ ಬ್ಯಾಂಕ್​ಗಳ ಪೈಕಿ ಭಾರತೀಯ ಸ್ಟೇಟ್​ ಬ್ಯಾಂಕ್​ ಮೊದಲ ಸ್ಥಾನದಲ್ಲಿದೆ ಎಂಬ ಸಂಗತಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಪಡೆದ ಮಾಹಿತಿಯಿಂದ ಬಹಿರಂಗವಾಗಿದೆ.

ನೀಮುಚ್​ ಮೂಲದ ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಚಂದ್ರಶೇಖರ್​ ಗೌರ್​ ಭಾರತೀಯ ರಿಸರ್ವ್​ ಬ್ಯಾಂಕ್​ನಿಂದ ಪಡೆದುಕೊಂಡಿರುವ ಮಾಹಿತಿ ಇದಾಗಿದೆ. ಒಟ್ಟಾರೆ ವಂಚನೆಯಾಗಿರುವ ಮೊತ್ತದಲ್ಲಿ ಶೇ.38 ಮೊತ್ತ ಭಾರತೀಯ ಸ್ಟೇಟ್​ ಬ್ಯಾಂಕ್​ನದ್ದಾಗಿದೆ. ಅಂದರೆ 1,197 ಪ್ರಕರಣಗಳಲ್ಲಿ 12,012.77 ಕೋಟಿ ರೂ. ವಂಚನೆಯಾದಂತಾಗಿದೆ.

ಅಲಹಾಬಾದ್​ ಬ್ಯಾಂಕ್​ಗೆ ಒಟ್ಟಾರೆ 381 ಪ್ರಕರಣಗಳಿಂದ 2,855.46 ಕೋಟಿ ರೂ., ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 99 ಪ್ರಕರಣಗಳಿಂದ 2,526.55 ಕೋಟಿ ರೂ. ವಂಚನೆಯಾಗಿದೆ ಎಂದು ಆರ್​ಬಿಐ ಮಾಹಿತಿ ನೀಡಿರುವುದಾಗಿ ಚಂದ್ರಶೇಖರ್​ ಗೌರ್​ ತಿಳಿಸಿದ್ದಾರೆ.

ಆದರೆ, ಯಾವ ರೀತಿಯಲ್ಲಿ ಯಾರು ಯಾರು ವಂಚಿಸಿದ್ದಾರೆ, ಹೇಗೆಲ್ಲ ವಂಚಿಸಿದ್ದಾರೆ ಎಂಬ ಬಗ್ಗೆ ಆರ್​ಬಿಐ ಮಾಹಿತಿ ನೀಡಿಲ್ಲ. ಹಾಗೂ ಇಷ್ಟೆಲ್ಲ ವಂಚನೆಯಿಂದ ಬ್ಯಾಂಕ್​ಗಳಿಗೆ ನಷ್ಟವಾಗಿರುವ ಪ್ರಮಾಣದ ಬಗ್ಗೆಯೂ ಮಾಹಿತಿ ಇದರಲ್ಲಿ ಎಂದು ಹೇಳಿದ್ದಾರೆ.

ಇತರೆ ಬ್ಯಾಂಕ್​ಗಳ ವಿವರ
ಬ್ಯಾಂಕ್​ ಆಫ್​ ಬರೋಡಾಕ್ಕೆ 75 ಪ್ರಕರಣಗಳಲ್ಲಿ 2,297.05 ಕೋಟಿ ರೂ., ಓರಿಯೆಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್​ಗೆ 45 ಪ್ರಕರಣಗಳಲ್ಲಿ 2,133.08 ಕೋಟಿ ರೂ., ಕೆನರಾ ಬ್ಯಾಂಕ್​ಗೆ 69 ಪ್ರಕರಣಗಳಲ್ಲಿ 2,035.81 ಕೋಟಿ ರೂ., ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾಕ್ಕೆ 194 ಪ್ರಕರಣಗಳಲ್ಲಿ 1,982.27 ಕೋಟಿ ರೂ., ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾಕ್ಕೆ 31 ಪ್ರಕರಣಗಳಲ್ಲಿ 1,196.19 ಕೋಟಿ ರೂ., ಕಾರ್ಪೋರೇಷನ್​ ಬ್ಯಾಂಕ್​ಗೆ 16 ಪ್ರಕರಣಗಳಲ್ಲಿ 960.80 ಕೋಟಿ ರೂ., ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ಗೆ 46 ಪ್ರಕರಣಗಳಲ್ಲಿ 934.67 ಕೋಟಿ ರೂ., ಸಿಂಡಿಕೇಟ್​ ಬ್ಯಾಂಕ್​ಗೆ 54 ಪ್ರಕರಣಗಳಲ್ಲಿ 795.75 ಕೋಟಿ ರೂ., ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾಕ್ಕೆ 51 ಪ್ರಕರಣಗಳಲ್ಲಿ 753.37 ಕೋಟಿ ರೂ., ಬ್ಯಾಂಕ್​ ಆಫ್​ ಇಂಡಿಯಾಕ್ಕೆ 42 ಪ್ರಕರಣಗಳಲ್ಲಿ 517 ಕೋಟಿ ರೂ., ಯುಕೋ ಬ್ಯಾಂಕ್​ಗೆ 34 ಪ್ರಕರಣಗಳಲ್ಲಿ 470.74 ಕೋಟಿ ರೂ. ವಂಚನೆಯಾಗಿದೆ.

 

Leave a Reply

Your email address will not be published. Required fields are marked *