17.8 C
Bengaluru
Wednesday, January 22, 2020

ಪೊಲೀಸರ ಹೆಸರಲ್ಲಿ ದೂರುದಾರಗೆ ವಂಚನೆ!: ಇಲಾಖೆಯ ಇ-ಲಾಸ್ಟ್ ಆಪ್ ಮೂಲಕ ಕೊಟ್ಟ ದೂರಿನ ವಿವರವನ್ನೇ ಕದ್ದು ಮೋಸ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಬೆಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಆನ್​ಲೈನ್ ಮಾರ್ಕೆಟ್​ನಲ್ಲಿ ಯೋಧರ ಹೆಸರಲ್ಲಿ ಪರಿಚಯಿಸಿಕೊಂಡು ಯಾಮಾರಿಸುತ್ತಿದ್ದ ಸೈಬರ್ ಖದೀಮರು, ಇದೀಗ ಪೊಲೀಸರ ಹೆಸರಿನಲ್ಲಿಯೇ ವಂಚನೆಗೆ ಇಳಿದಿದ್ದಾರೆ. ಪೊಲೀಸ್ ಇಲಾಖೆಯ ಅಧಿಕೃತ ‘ಇ-ಮೇಲ್’ ನಂತೆ ನಕಲಿ ಇ-ಮೇಲ್​ನಿಂದ ಸಂದೇಶ ರವಾನಿಸಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದಾರೆ.

‘ಕಳ್ಳತನವಾಗಿದ್ದ ಮೊಬೈಲ್ ಪತ್ತೆಯಾಗಿದೆ. ಅದನ್ನು ತೆಗೆದುಕೊಂಡು ಹೋಗುವಂತೆ’ ಸೂಚಿಸಿ, ನಕಲಿ ಪೊಲೀಸ್ ಅಧಿಕಾರಿಯ ಫೋನ್ ನಂಬರ್ ಕೊಟ್ಟು ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ದೋಚಿರುವ ಪ್ರಕರಣ ವರದಿಯಾಗಿದೆ. ವಂಚನೆಗೆ ಎನ್​ಐಸಿ ಸರ್ವರ್ ಬಳಸುತ್ತಿರುವ ಬಗ್ಗೆ ಸೈಬರ್ ಕ್ರೖೆಂ ಠಾಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಂಚನೆ ಹೇಗೆ?: ಶಾಂತಿನಗರದ ನಿವಾಸಿ ಸರ್ಕಾರಿ ನೌಕರ ಮಕ್ಸೂದ್ ದೇಸಾಯಿ ಎಂಬುವರು ಜುಲೈನಲ್ಲಿ ಸ್ಯಾಮ್ಂಗ್ ಎ50 ಫೋನ್’ ಅನ್ನು ದುಷ್ಕರ್ವಿುಗಳು ದೋಚಿದ್ದರು. ಈ ಸಂಬಂಧ ಅವರು ‘ಇ-ಲಾಸ್ಟ್’ ಮೊಬೈಲ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಿದ್ದರು. ಡಿ.2ರಂದು ಮುಂಬೈನ ಓಶಿವಾರ ಪೊಲೀಸ್ ಠಾಣೆಯಿಂದ ದೇಸಾಯಿ ಅವರಿಗೆ ‘ನೀವು ಕಳೆದುಕೊಂಡಿದ್ದ ಸ್ಯಾಮ್ಂಗ್ ಎ50 ಮೊಬೈಲ್ ಪತ್ತೆಯಾಗಿದೆ. ಅದನ್ನು ಪಡೆದುಕೊಳ್ಳಲು ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಸಂಜು ರಾಮನ್ ಅವರನ್ನು ಸಂರ್ಪಸಿ ಎಂದು ಫೋನ್ ನಂಬರ್ ನಮೂದಿಸಿ’ ಇ-ಮೇಲ್ ಕಳುಹಿಸಿದ್ದರು.

ತದನಂತರ ದೇಸಾಯಿ ಅವರು, ಪಿಎಸ್​ಐ ಸಂಜು ರಾಮನ್ ಎಂಬಾತನಿಗೆ ಕರೆ ಮಾಡಿ ಪತ್ತೆಯಾಗಿರುವ ಮೊಬೈಲ್ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆತ, ‘ನಿಮ್ಮ ಮೊಬೈಲ್ ಅನ್ನು ಶೀಘ್ರದಲ್ಲಿ ಕಳುಹಿಸಿ ಕೊಡುತ್ತೇವೆ. ಕೊರಿಯರ್ ಶುಲ್ಕವನ್ನು ನೀವೇ ಭರಿಸಬೇಕು. 24 ಗಂಟೆಯಲ್ಲಿ ಮೊಬೈಲ್ ತಲುಪಬೇಕಾದರೆ 900 ರೂ. ಅಥವಾ ಎರಡು ದಿನದಲ್ಲಿ ಆದರೆ 435 ರೂ. ಖರ್ಚಾಗುತ್ತದೆ. ಆ ಹಣವನ್ನು ಗೂಗಲ್ ಪೇ (ವ್ಯಾಲೆಟ್)ನಿಂದ ಸಂದಾಯ ಮಾಡುವಂತೆ’ ಸೂಚಿಸಿದ್ದರು. ಅದನ್ನು ನಂಬಿ ಗೂಗಲ್ ಪೇ ಮೂಲಕ 435 ರೂ. ಸಂದಾಯ ಮಾಡಿದ್ದಾರೆ.

ಹಣ ಸಂದಾಯ ಮಾಡಿದ ಎರಡು ದಿನ ಕಳೆದರೂ ದೇಸಾಯಿ ಅವರಿಗೆ ಮೊಬೈಲ್ ತಲುಪಿರಲಿಲ್ಲ. ಹಾಗಾಗಿ ಸಂಜು ರಾಮನ್ ಎಂಬಾತನಿಗೆ ಮತ್ತೆ ಫೋನ್ ಮಾಡಿ ತನ್ನ ಮೊಬೈಲ್ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆತ, ‘ನೀವು ಕಳುಹಿಸಿರುವ ಹಣ ಜಮಾ ಆಗಿಲ್ಲ. ನಿಮ್ಮ ವಾಟ್ಸ್​ಆಪ್​ಗೆ ಕ್ಯೂಆರ್ ಕೋಡ್ ಕಳುಹಿಸುತ್ತೇನೆ. ಮತ್ತೊಮ್ಮೆ ಹಣ ಕಳುಹಿಸಿ’ ಎಂದು ಫೋನ್ ಇಟ್ಟಿದ್ದ.

ದೇಸಾಯಿ ಅವರಿಗೆ ಅನುಮಾನ ಬಂದು ಖಚಿತಪಡಿಸಿಕೊಳ್ಳುವ ಸಂಬಂಧ ಮುಂಬೈ ಪೊಲೀಸ್ ಇಲಾಖೆಯನ್ನು ಸಂರ್ಪಸಿ ಓಶಿವಾರ ಠಾಣೆಯ ಫೋನ್ ನಂಬರ್ ಪಡೆದುಕೊಂಡಿದ್ದರು. ಅಲ್ಲಿನ ಠಾಣಾಧಿಕಾರಿಗೆ ಕರೆ ಮಾಡಿ ವಿಚಾರಿಸಿದಾಗ, ‘ನಮ್ಮ ಠಾಣೆಯಲ್ಲಿ ಸಂಜು ರಾಮನ್ ಎಂಬ ಹೆಸರಿನ ಎಸ್​ಐ ಇಲ್ಲ. ಠಾಣೆಯ ಅಧಿಕೃತ ಇ-ಮೇಲ್​ನಿಂದ ಸಂದೇಶ ಕಳುಹಿಸಿಲ್ಲ’ ಎಂದು ಹೇಳಿದ್ದಾರೆ.

ಸೈಬರ್ ವಂಚಕರು ದೂರುದಾರರ ‘ಇ-ಮೇಲ್’ ಹ್ಯಾಕ್ ಮಾಡಿ, ಅದರಲ್ಲಿನ ಡೇಟಾ ಕದ್ದು ಕೃತ್ಯ ಎಸಗಿರುವ ಸಾಧ್ಯತೆಯಿದೆ. ಈ ಸಂಬಂಧ ಅವರ ಇ-ಮೇಲ್ ಪರಿಶೀಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು.

| ಪ್ರಶಾಂತ್ ಬಾಬು ಪೊಲೀಸ್ ಇನ್​ಸ್ಪೆಕ್ಟರ್ (ಸೈಬರ್ ಕ್ರೖೆಂ)

ಎನ್​ಐಸಿ ಸರ್ವರ್ ಸೃಷ್ಟಿ?

ದೂರುದಾರ ದೇಸಾಯಿಗೆ ಬಂದಿರುವ ‘ಇ-ಮೇಲ್’ ಸರ್ಕಾರಿ ಇಲಾಖೆಗಳು ಅಧಿಕೃತವಾಗಿ ಬಳಸುವಂತದ್ದು. ಸರ್ಕಾರಿ ಇಲಾಖೆಗಳು ಹಾಗೂ ಅಧೀನದ ಕಚೇರಿಗಳ ಬಳಕೆಗೆ ಮಾತ್ರ ‘ಡಾಟ್ ಗೋ ಡಾಟ್ ಇನ್’ ಇ-ಮೇಲ್ ಬಳಸಲು ಅವಕಾಶವಿದೆ. ಈ ಸಂಬಂಧ ಇಲಾಖೆಯ ಮುಖ್ಯಸ್ಥರು ಎನ್​ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ)ಗೆ ಪತ್ರ ಬರೆದು ಒಪ್ಪಿಗೆ ಪಡೆಯಬೇಕು. ‘ಡಾಟ್ ಗೋ ಡಾಟ್ ಇನ್’ ಇ-ಮೇಲ್ ಅನ್ನು ಎನ್​ಐಸಿ ಸರ್ವರ್​ನಲ್ಲಿ ಮಾತ್ರ ತಯಾರಿಸಲು ಸಾಧ್ಯ.

| ಯಂಕಣ್ಣ ಸಾಗರ್

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...