ಭಾರತೀಯ ರೈಲ್ವೆ ಅಭಿವೃದ್ಧಿ ಫ್ರಾನ್ಸ್ ಸರ್ಕಾರದ ಸಹಕಾರ

ನವದೆಹಲಿ: ಭಾರತ ಮತ್ತು ಫ್ರಾನ್ಸ್ ಸರ್ಕಾರದ ನಡುವಿನ ರೈಲ್ವೆ ಸಹಕಾರ ಸಂಬಂಧದ ಮುಂದುವರಿದ ಭಾಗವಾಗಿ, ಭಾರತದ ರೈಲ್ವೆ ಸ್ಟೇಷನ್​ಗಳ ಅಭಿವೃದ್ಧಿಗೆ ಬೆಂಬಲ ನೀಡಲು ಫ್ರಾನ್ಸ್ ಸರ್ಕಾರ ತೀರ್ವನಿಸಿದೆ. ಈ ಸಂಬಂಧ ಎರಡೂ ಸರ್ಕಾರಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಫ್ರಾನ್ಸ್ ಸರ್ಕಾರದ ಯೂರೋಪ್ ಮತ್ತು ವಿದೇಶಾಂಗ ವ್ಯವಹಾರ ಸಚಿವ ಜೀನ್ ಬ್ಯಾಪ್ಟಿಸ್ ಲೆಮೋಯ್್ನ ದೆಹಲಿಯ ರೈಲ್ವೆ ಸಚಿವಾಲಯದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

2018ರಲ್ಲಿ ಫ್ರಾನ್ಸ್ ಸರ್ಕಾರದ ರಾಷ್ಟ್ರೀಯ ರೈಲ್ವೆ ವಿಭಾಗದೊಂದಿಗೆ ಒಡಂಬಡಿಕೆ ಮಾಡಿಕೊಂಡು ದೆಹಲಿ- ಚಂಡಿಗಢ ರೈಲ್ವೆ ಅಭಿವೃದ್ಧಿ ಮತ್ತು ಲೂಧಿಯಾನ- ಅಂಬಾಲ ರೈಲ್ವೆ ಸ್ಟೇಷನ್​ಗಳ ಅಭಿವೃದ್ಧಿ ಅಧ್ಯಯನ ಕೈಗೊಳ್ಳಲಾಗಿದ್ದನ್ನು ಅಂಗಡಿ ತಮ್ಮ ಭಾಷಣದಲ್ಲಿ ನೆನಪಿಸಿಕೊಂಡರು. ಫ್ರಾನ್ಸ್ ಸಹಕಾರದಿಂದಾಗಿ ಎರಡು ದೇಶಗಳ ಸಂಬಂಧ ವೃದ್ಧಿಸುವ ಜತೆಗೆ ದೇಶದ ರೈಲ್ವೆ ನಿಲ್ದಾಣಗಳು ವಿಶ್ವ ದರ್ಜೆಗೆ ಏರಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *