ಸುಗಂಧಾದೇವಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾವನ ಸೌಂದತ್ತಿ: ಗ್ರಾಮದೇವತೆ ಶ್ರೀ ಸುಗಂಧಾದೇವಿ ಜಾತ್ರೆ ಮಾ.25 ರಂದು ನಡೆಯಲಿದೆ. ಜಾತ್ರೆಗೆ 15 ದಿನ ಮುಂಚಿತವಾಗಿಯೇ ಕಮಿಟಿಯಿಂದ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಭಕ್ತರು ಕೊಡುವ ದೇಣಿಗೆ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು.

ಜಾನುವಾರು ಮಾರಾಟಕ್ಕೆ ಆಗಮಿಸುವ ರೈತರಿಗೆ ಸ್ಥಳ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸುತ್ತಲಿನ ಗ್ರಾಮದ ರೈತರು ತಮ್ಮ ತಮ್ಮ ಸ್ಥಳ ನಿಗದಿಪಡಿಸಿಕೊಳ್ಳಬೇಕು. ಅಂಗಡಿಕಾರರು ಕಮಿಟಿಯನ್ನು ಸಂಪರ್ಕಿಸಿ ಜಾಗ ಪಡೆಯಬೇಕು ಎಂದು ಸುಗಂದಾದೇವಿ ಯಾತ್ರಾ ಕಮಿಟಿ ಅಧ್ಯಕ್ಷ ಶ್ರೀಮಂತ ಹಂಜೆ ತಿಳಿಸಿದ್ದಾರೆ. ತಾತ್ಯಾಸಾಹೇಬ ಕಾಟೆ, ಶ್ರೀಕಾಂತ ಮಂಗಸೂಳೆ, ರಾವಸಾಹೇಬ ಕಾಟೆ, ಅದಪ್ಪ ಗೌರಾಜ, ಪೋಪಟ ಕೂಗೆ, ಅಜಿತ ಖೇಮಲಾಪುರೆ, ದಶರಥ ಕಾಟೆ, ಸುಭಾಷ ಹಂಜೆ, ಮಹಾವೀರ ಜನಾಜ ಮತ್ತಿತತರರಿದ್ದರು.