ಆಸ್ಟ್ರೇಲಿಯಾ ವಿರುದ್ಧ 622ರನ್​ ಗಳಿಸಿ ಡಿಕ್ಲೇರ್​ ಮಾಡಿದ ಭಾರತ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯ ಆಡುತ್ತಿರುವ ಭಾರತ ತನ್ನ ಮೊದಲ ಇನಿಂಗ್ಸ್ ಅನ್ನು 622 ರನ್​ಗಳಿಗೆ ಡಿಕ್ಲೇರ್​ ಮಾಡಿಕೊಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ ಉತ್ತಮ ಆರಂಭದೊಂದಿಗೆ ಬೃಹತ್​ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

ಭಾರತದ ಪರ ಚೇತೇಶ್ವರ ಪೂಜಾರಾ-193, ರಿಷಭ್​ ಪಂಥ್​ 159, ರವೀಂದ್ರ ಜಡೇಜಾ- 81 ಆಗರ್ವಾಲ್​-77 ರನ್​ಗಳ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರೆಲ್ಲರ ಉತ್ತಮ ಆಟದ ನೆರವಿನೊಂದಿಗೆ ಭಾರತ 167.2 ಓವರ್​ಗಳಲ್ಲಿ 7 ವಿಕೆಟ್​ ನಷ್ಟದೊಂದಿಗೆ 622ರನ್​ಗಳನ್ನು ಗಳಿಸಿದೆ.

ಇದಕ್ಕೆ ಪ್ರತಿಯಾಗಿ ಇಂದು ಬ್ಯಾಟಿಂಗ್​ ಆರಂಭಿಸಿರುವ ಆಸ್ಟ್ರೇಲಿಯಾ ಪರ ಹ್ಯಾರಿಸ್​ ಮತ್ತು ಕವಾಜಾ ಬ್ಯಾಟಿಂಗ್​ ಆರಂಭಿಸಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ 10 ಓವರ್​ಗಳಲ್ಲಿ 24 ರನ್​ ಗಳಿಸಿದೆ.
ಭಾರತ ತನ್ನ ಮೊದಲ ದಿನದಾಟದಲ್ಲಿ 90 ಓವರ್​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 303ರನ್​ ಗಳಿಸಿತ್ತು.