More

  ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ಗೆ ರಾಜ್ಯದ ನಾಲ್ವರು ಯುವ ಅಥ್ಲೀಟ್​ಗಳು

  ಬೆಂಗಳೂರು: ದುಬೈನಲ್ಲಿ ಬುಧವಾರದಿಂದ ನಡೆಯಲಿರುವ ಏಷ್ಯನ್​ ಜೂನಿಯರ್​ (20 ವಯೋಮಿತಿ) ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ನಾಲ್ವರು ಮಹಿಳಾ ಅಥ್ಲೀಟ್​ಗಳು ಸ್ಪರ್ಧಿಸಲಿದ್ದಾರೆ. ಪಾವನಾ ನಾಗರಾಜ್​ ಲಾಂಗ್​ಜಂಪ್​ ಮತ್ತು ಹೆಪ್ಟಾಥ್ಲಾನ್​, ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್​, ಶ್ರೀಯಾ ರಾಜೇಶ್​ 400 ಮೀ. ಹರ್ಡಲ್ಸ್​ ಮತ್ತು ನಿಯೋಲ್​ ಕಾರ್ನೆಲಿಯೊ 4/100 ಮೀ. ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

  ರಾಜ್ಯದ ಮಾಜಿ ಅಥ್ಲೀಟ್​ಗಳಾದ ಸಹನಾ ಕುಮಾರಿ ಮತ್ತು ಅಶ್ವಿನಿ ಅಕ್ಕುಂಜಿ ಕೋಚ್​ಗಳಾಗಿ ತಂಡದೊಂದಿಗೆ ತೆರಳಿದ್ದಾರೆ. ಇದು ಆಗಸ್ಟ್​ನಲ್ಲಿ ಪೆರುನಲ್ಲಿ ನಡೆಯಲಿರುವ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ಗೆ ಅರ್ಹತಾ ಕೂಟವೂ ಆಗಿದೆ.

  2023ರ ಏಷ್ಯಾ ಕಿರಿಯರ ಕೂಟದಲ್ಲಿ ಭಾರತ 6 ಚಿನ್ನ, 7 ಬೆಳ್ಳಿ ಸಹಿತ ಸಹಿತ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿತ್ತು.

  IPL 2024: ಯಶಸ್ವಿ ಜೈಸ್ವಾಲ್​ ಬ್ಯಾಟಿಂಗ್​ ಕೊಂಡಾಡಿದ ವೆಸ್ಟ್​ ಇಂಡೀಸ್​ ದಿಗ್ಗಜ ಬ್ರಿಯಾನ್​ ಲಾರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts