ರಾಮದುರ್ಗ: ಪಟ್ಟಣದಲ್ಲಿ ಡಿ.8 ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್‌ನ 15 ಕ್ಷೇತ್ರಗಳ ನಿರ್ದೇಶಕರ ಆಯ್ಕೆ ಪೈಕಿ ನಾಲ್ಕು ಕ್ಷೇತ್ರಗಳಿಂದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ನಾಲ್ವರು ಸದಸ್ಯರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಹಲಗತ್ತಿ ಕ್ಷೇತ್ರದಿಂದ ಕೀರಪ್ಪ ದಾಡಿಭಾಂವಿ, ಮುದೇನೂರ- ಕೃಷ್ಣಪ್ಪ ಲಮಾಣಿ, ಬಟಕುರ್ಕಿ- ಶಿವನಗೌಡ ಪಾಟೀಲ ಹಾಗೂ ಕುಳ್ಳೂರ ಕ್ಷೇತ್ರದಿಂದ ರಾಜೇಶ ಮರಲಿಂಗನವರ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ನೇತೃತ್ವದಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು.
ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸನ್ಮಾನಿಸಿದರು. ಬಿಜೆಪಿ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ಜಿಪಂ ಮಾಜಿ ಸದಸ್ಯ ಮಾರುತಿ ತುಪ್ಪದ, ಪುರಸಭೆ ಸದಸ್ಯ ನಾಗರಾಜ ಕಟ್ಟಿಮನಿ ಇತರರಿದ್ದರು.