ಶಿರ್ವದಲ್ಲಿ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ

ಶಿರ್ವ: ಶಿರ್ವದ ಸಂಸ್ಥೆಯೊಂದರಲ್ಲಿ ಕಲಿಯುತ್ತಿದ್ದ ನಾಲ್ಕು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಶಿರ್ವದ ಫೈಜಲ್ ಇಸ್ಲಾಂ ಎಜುಕೇಶನ್ ಟ್ರಸ್ಟ್ ಸಂಸ್ಥೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ 2.30ರಿಂದ 3.30ರ ಅವಧಿಯಲ್ಲಿ ಹೊರಗಡೆ ಹೋದವರು ನಾಪತ್ತೆಯಾಗಿದ್ದಾರೆ. ಬಿಹಾರದ ವಿದ್ಯಾರ್ಥಿಗಳಾದ ತಬಾರಕ್, ಜಮ್‌ಶೆಡ್, ತಂಜೀರ್ ಆಲ್‌ಮ್, ಶಾಹಿಲ್ ಎಂಬುವರು ಕಾಣೆಯಾಗಿರುವ ಬಗ್ಗೆ ಪರ್ವೇಜ್ ಸಲೀಮ್ ಎಂಬುವರು ನೀಡಿದ ದೂರಿನ ಪ್ರಕಾರ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.