ಇಳಕಲ್ಲ(ಗ್ರಾ): ನಗರದ ಹುಚನೂರ ರಸ್ತೆ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ನಾಲ್ಕು ಅನಧಿಕೃತ ಅಂಗಡಿಗಳನ್ನು ಜೆಸಿಬಿ ಮೂಲಕ ಶುಕ್ರವಾರ ಬೆಳಗ್ಗೆ ಪೌರಾಯುಕ್ತ ಶ್ರೀನಿವಾಸ ಜಾಧವ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಮಲ್ಲು ಸತ್ತಿಗೌಡರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಡಾಬಾ, ಗ್ರಾನೈಟ್ ಶೋರೂಮ್, ಪಾನಬೀಡಾ ಅಂಗಡಿ ಮತ್ತು ಪಂಚರ್ ಅಂಗಡಿಯಲ್ಲಿದ್ದ ವಸ್ತುಗಳನ್ನು ಪುರಸಭೆ ಸಿಬ್ಬಂದಿ ಹೊರತೆಗೆದು ನಂತರ ಕಾರ್ಯಾಚರಣೆ ನಡೆಸಿದರು.
ಈ ಕುರಿತು ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ತೆರವುಗೊಳಿಸಲಾದ ಜಾಗದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ನೀಡಲಾಗಿದೆ ಎಂದರು.