ಜಂಟಿ ಅಧಿವೇಶನಕ್ಕೆ ಕ್ಷಣಗಣನೆ: ಇನ್ನೂ ಸಂಪರ್ಕಕ್ಕೆ ಸಿಗದ ಕಾಂಗ್ರೆಸ್​ ಅತೃಪ್ತ ಶಾಸಕರು

ಬೆಂಗಳೂರು: ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭಕ್ಕೆ ಇನ್ನು ಕೆಲವೇ ನಿಮಿಷ ಬಾಕಿ ಇದೆ. ಆದರೆ ಇದುವರೆಗೂ ಕಾಂಗ್ರೆಸ್​ನ ಅತೃಪ್ತ ಶಾಸಕರು ಕೈ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೈ ಶಾಕರಿಗೆ ವಿಪ್​ ಜಾರಿಗೊಳಿಸಿ ಕಡ್ಡಾಯವಾಗಿ ಅಧಿವೇಶನಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಅತೃಪ್ತ ಶಾಸಕರಾದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಳ್ಳಿ, ಬಿ. ನಾಗೇಂದ್ರ ಮತ್ತು ಉಮೇಶ್​ ಜಾಧವ್​ ಕೈ ನಾಯಕರ ಕರೆ ಸ್ವೀಕರಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅತೃಪ್ತ ಶಾಸಕರ ಕೊಠಡಿಯ ಬಾಗಿಲಿಗೆ ವಿಪ್​ ನೋಟಿಸ್​ ಅಂಟಿಸಲಾಗಿದೆ. ಪಿ.ಆರ್​. ರಮೇಶ್​, ಪ್ರಕಾಶ್​ ರಾಥೋಡ್​ ಮತ್ತು ಗಣೇಶ್​ ಹುಕ್ಕೇರಿ, ವಿಧಾನಸೌಧದಲ್ಲಿ ಶಾಸಕರ ಕೊಠಡಿಗೆ ನೋಟಿಸ್​ ಅಂಟಿಸಿದ್ದಾರೆ.

One Reply to “ಜಂಟಿ ಅಧಿವೇಶನಕ್ಕೆ ಕ್ಷಣಗಣನೆ: ಇನ್ನೂ ಸಂಪರ್ಕಕ್ಕೆ ಸಿಗದ ಕಾಂಗ್ರೆಸ್​ ಅತೃಪ್ತ ಶಾಸಕರು”

Comments are closed.