ದಾಪಂತ್ಯಕ್ಕೆ ಕಾಲಿಟ್ಟ ನಾಲ್ಕು ಜೋಡಿ

ಹುಣಸೂರು: ಪಟ್ಟಣದ ಶ್ರೀ ಶಿರಡಿಸಾಯಿ ಮಂದಿರದ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.
ಸಾಯಿಮಂದಿರದ ಮುಂಭಾಗ ನಿರ್ಮಾಣಗೊಂಡಿದ್ದ ಭವ್ಯ ವೇದಿಕೆಯಲ್ಲಿ ಅರ್ಚಕ ನಾರಾಯಣಮೂರ್ತಿ ಮತ್ತವರ ತಂಡ ವಿವಾಹದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು.

ಟ್ರಸ್ಟ್‌ನ ಧರ್ಮದರ್ಶಿ ಹಾಗೂ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಮುಂದಿನ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ವಿವಾಹ ಕೈಗೊಳ್ಳಲಾಗುವುದು. ದುಂದುವೆಚ್ಚ ತಪ್ಪಿಸಲು ಗ್ರಾಮೀಣ ಭಾಗದ ರೈತರು ಇಂತಹ ಸಾಮೂಹಿಕ ವಿವಾಹ ಸಮಾರಂಭಗಳನ್ನು ಬಳಸಿಕೊಳ್ಳಬೇಕೆಂದು ಕೋರಿದರು.
ಶಿರಡಿ ಸಾಯಿ ಟ್ರಸ್ಟ್‌ನ ಅಧ್ಯಕ್ಷ ಎಚ್.ಎನ್.ಪ್ರೇಮ್‌ಕುಮಾರ್, ಧರ್ಮದರ್ಶಿ ರತ್ನ ಪ್ರೇಮ್‌ಕುಮಾರ್, ಗೌರವ ಕಾರ್ಯದರ್ಶಿ ಶಶಿಧರ್, ಮುಖಂಡರಾದ ಮಾಜಿ ಶಾಸಕ ಸಿ.ಎಚ್.ವಿಜಯಶಂಕರ್, ಹಂದನಹಳ್ಳಿ ಸೋಮಶೇಖರ್, ಅಮರನಾಥ್ ಇತರರಿದ್ದರು.

ನವಜೀವನಕ್ಕೆ ಕಾಲಿಟ್ಟವರು: ಅಸ್ವಾಳು ಗ್ರಾಮದ ಸಿ.ಸಹನಾ ಮತ್ತು ಮಂಜುನಾಥ್, ಹಿರೀಕ್ಯಾತನಹಳ್ಳಿಯ ಈಶ್ವರ ಮತ್ತು ಹಗರನಹಳ್ಳಿಯ ಪ್ರಿಯಾಂಕ, ಹೆಮ್ಮಿಗೆ ಗ್ರಾಮದ ಎಸ್.ಮಹದೇವ್ ಮತ್ತು ಕಂದೆಗಾಲ ಗ್ರಾಮದ ಎಚ್.ಸಿ.ಸುಷ್ಮಾ ಹಾಗೂ ಅಂತರಸಂತೆಯ ಕಾಳಿಂಗನಾಯ್ಕ ಮತ್ತು ಕೊತ್ತೇಗಾಲದ ಮಹದೇವ್ ನವಜೀವನಕ್ಕೆ ಕಾಲಿಟ್ಟರು.