ಪಲಕ್ಕಾಡ್: ನಾಲ್ಕು ಕಾಲುಳ್ಳ ಕೋಳಿ ಮರಿ ಇದೀಗ ಕೇರಳದ ಪಲಕ್ಕಾಡ್ನಲ್ಲಿ ಎಲ್ಲರ ಗಮನ ಸೆಳೆದಿದೆ. ವಿಶೇಷ ಕೋಳಿ ಮರಿಯು ವದವನ್ನೂರ್ ನಿವಾಸಿ ಫಾರೂಕ್ ಎಂಬುವರ ಮನೆಯಲ್ಲಿ ಬೆಳೆಯುತ್ತಿದೆ.
ಕೋಳಿ ಮರಿ ನಾಲ್ಕು ಕಾಲು ಹೊಂದಿದ್ದರು ಸಹ ನಡೆಯುವುದು ಮಾತ್ರ ಎರಡು ಕಾಲಿನಲ್ಲಿ. ನಾಲ್ಕು ಕಾಲಿನ ಮರಿಯು ಡಿಸೆಂಬರ್ 31ರಂದು 8 ಸಾಮಾನ್ಯ ಮರಿಗಳೊಂದಿಗೆ ಮೊಟ್ಟೆಯೊಡೆಯಿತು. ಹೊಸ ವರ್ಷದ ಹೊಸ್ತಿಲಲ್ಲಿ ಜನಿಸಿರುವ ನಾಲ್ಕು ಕಾಲಿನ ಕೋಳಿ ಮರಿಯನ್ನು ಫಾರೂಕ್ ದಂಪತಿ ಹೊಸ ವರ್ಷ ಉಡುಗೊರೆ ಅಂದುಕೊಂಡಿದ್ದಾರೆ.
ಇದನ್ನೂ ಓದಿ: ದೇಶದ ಕಿರಿಯ ಮಹಿಳಾ ಬಸ್ ಡ್ರೈವರ್: 8 ವರ್ಷದಿಂದಲೇ ಬಸ್ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!
ಫಾರೂಕ್ ಅವರು ಐದು ವರ್ಷ ಸೌದಿ ಅರೇಬಿಯಾದ ರಿಯಾದ್ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದ್ದರು. ಇದೀಗ ಪಲಕ್ಕಾಡ್ನಲ್ಲಿ ಆಟೋ ಡ್ರೈವರ್ ಆಗಿದ್ದಾರೆ. ಅಲ್ಲದೆ, ಕೋಳಿ ಉದ್ಯಮವನ್ನು ನಡೆಸುತ್ತಿದ್ದಾರೆ. ಸದ್ಯ ಫಾರೂಕ್ ಅವರು ಫಾರಂನಲ್ಲಿ 90 ಕೋಳಿಗಳಿವೆ.
ಫಾರೂಕ್ ಅವರ ಮಕ್ಕಳಾದ ಫರ್ನಿಥಾ, ಫಾತಿಮಾ ಮತ್ತು ಫಹಾದ್ ಕೋಳಿ ಮರಿಯ ಪಾಲನೆ, ಪೋಷಣೆ ಮಾಡುತ್ತಾರೆ. ಮರಿ ಬೆಳೆದು ದೊಡ್ಡದಾದ ಮೇಲೆ ಸಾಯಿಸುವುದಿಲ್ಲ ಮತ್ತು ಯಾರಿಗೂ ಮಾರಾಟವನ್ನು ಮಾಡುವುದಿಲ್ಲ ಎನ್ನುತ್ತಾರೆ ಫಾರೂಕ್. (ಏಜೆನ್ಸೀಸ್)
ಇದನ್ನೂ ಓದಿರಿ: ಗಾಂಜಾ ವ್ಯಸನಿಯ ಪ್ರೀತಿಯ ಬಲೆಯಲ್ಲಿ ಬಿದ್ದವಳ ದುರಂತ ಅಂತ್ಯ: ತಾಯಿ ಬೆನ್ನಲ್ಲೆ ಯುವತಿಯೂ ಆತ್ಮಹತ್ಯೆ
ಓಟಿಟಿ ಮೇಲೆ ದರ್ಶನ್ ಗರಂ: ಅಂಬಾನಿ ವಿರುದ್ಧ ಗಂಭೀರ ಆರೋಪ ಮಾಡಿದ ದಚ್ಚು!
VIDEO: ಬಾಲಾಕೋಟ್ ಏರ್ಸ್ಟ್ರೈಕ್ ಸಾಕ್ಷಿ ಕೇಳಿದವರಿಗೆ ಪಾಕ್ ನೀಡಿದೆ ಸ್ಫೋಟಕ ಮಾಹಿತಿ- ನೀವೂ ಕೇಳಿ…