ಬೆಂಗಳೂರು: 2020ರಲ್ಲಿ 12 ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದಲಿದ್ದು, ಜ.31ರಂದು ಡಿಜಿಪಿ ನೀಲಮಣಿ ಎನ್. ರಾಜು ಸೇರಿ ನಾಲ್ವರು ಅಧಿಕಾರಿಗಳು ನಿವೃತ್ತರಾಗಲಿದ್ದಾರೆ. ಹೊಸ ಡಿಜಿಪಿ ಆಯ್ಕೆಗೆ ಸರ್ಕಾರ ಈಗಾಗಲೇ ಪಕ್ರಿಯೆ ಶುರು ಮಾಡಿದ್ದು, ಮೂವರು ಅಧಿಕಾರಿಗಳ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಟ್ಟಿದೆ.
ಸೇವಾ ಹಿರಿತನ ಆಧಾರದ ಮೇಲೆ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ. ಪ್ರಸಾದ್, ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಮತ್ತು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಸಿಪಿ ಪದಮ್ ಕುಮಾರ್ ಗರ್ಗ್ ಹೆಸರನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ನಿವೃತ್ತ ಡಿಜಿಪಿ ಶಂಕರ್ ಬಿದರಿ ಪ್ರಕರಣದ ಬಳಿಕ ಈವರೆಗೂ ಡಿಜಿಪಿ ಹುದ್ದೆ ನೇಮಕಾತಿ ಸೇವಾ ಹಿರಿತನದ ಮೇಲೆ ನಡೆಯುತ್ತಿದೆ. ಈಗಲೂ ಹಿರಿತನದ ಮೇಲೆ ಎ.ಎಂ. ಪ್ರಸಾದ್ ನೂತನ ಡಿಜಿ-ಐಜಿಪಿ ಆಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಇವರು 2020ರ ಅಕ್ಟೋಬರ್ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಂತರ ಪ್ರವೀಣ್ ಸೂದ್ ಇದ್ದು, 2024ರ ಮೇಗೆ ನಿವೃತ್ತರಾಗಲಿದ್ದಾರೆ. 2021ರ ಏಪ್ರಿಲ್ನಲ್ಲಿ ಗರ್ಗ್ ನಿವೃತ್ತಿ ಹೊಂದಲಿದ್ದಾರೆ.
2020ಕ್ಕೆ ನಿವೃತ್ತರಾಗುವವರು: ಜ.31ಕ್ಕೆ ಡಿಜಿಪಿಗಳಾದ ನೀಲಮಣಿ ಎನ್. ರಾಜು, ಎಂ.ಎನ್. ರೆಡ್ಡಿ, ರಾಘವೇಂದ್ರ ಔರಾದ್ಕರ್, ಡಿಐಜಿ ಪಿ. ರಾಜೇಂದ್ರ ಪ್ರಸಾದ್. ಮೇ 31ಕ್ಕೆ ಐಜಿಪಿ ಎಂ.ಎನ್. ನಾಗರಾಜು, ಡಿಐಜಿ ಮಂಜುನಾಥ ಅಣ್ಣಿಗೇರಿ. ಜುಲೈ 31ಕ್ಕೆ ಎಡಿಜಿಪಿ ಎನ್.ಎಸ್. ಮೇಘರಿಖ್ ಮತ್ತು ಡಿಐಜಿ ಟಿ.ಆರ್. ಸುರೇಶ್. ಹಾಗೂ ಸೆ.30ಕ್ಕೆ ಎಡಿಜಿಪಿ ಡಾ. ಪರಶಿವಮೂರ್ತಿ, ಡಿಜಿಪಿ ಎ.ಎಂ. ಪ್ರಸಾದ್. ಅ.31ಕ್ಕೆ ಡಿಜಿಪಿ ಟಿ. ಸುನೀಲ್ಕುಮಾರ್. ಡಿ.31ಕ್ಕೆ ಎಡಿಜಿಪಿ ಡಾ. ಆರ್.ಪಿ.ಶರ್ಮಾ.