ಕಾನೂನು ಬಾಹಿರವಾಗಿ ಗಡಿ ದಾಟಲು ಪ್ರಯತ್ನಿಸಿದ ಐವರು ಬಾಂಗ್ಲಾದೇಶಿಗರನ್ನು ಬಂಧಿಸಿದ ಬಿಎಸ್​ಎಫ್​ ಯೋಧರು

ಕೋಲ್ಕತ: ಗಡಿ ದಾಟಿ ಉತ್ತರ 24 ಪರಗಣ ಜಿಲ್ಲೆ ಮೂಲಕ ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದ ಐವರು ಬಾಂಗ್ಲಾದೇಶಿಯರನ್ನು ಗಡಿಭದ್ರತಾ ಪಡೆ (ಬಿಎಸ್​ಎಫ್) ಯೋಧರು ಇಂದು ಬಂಧಿಸಿದ್ದಾರೆ.

ಉತ್ತರ 24 ಪರಗಣದ ಘೋಜಾಡಂಗಾ ಮತ್ತು ತರಾಲಿ ಪ್ರದೇಶಗಳಲ್ಲಿ ಐವರು ಬಾಂಗ್ಲಾದೇಶಿ ಪ್ರಜೆಗಳು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದರು. ಗಸ್ತು ತಿರುಗುತ್ತಿದ್ದ ಬಿಎಸ್​ಎಫ್​ ಸಿಬ್ಬಂದಿ ಅವರನ್ನು ತಡೆಗಟ್ಟಿ, ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರೆಲ್ಲರಿಗೂ ಕಾನೂನು ಬಾಹಿರವಾಗಿ ಭಾರತಕ್ಕೆ ಒಳನುಸುಳಲು ಬಾಂಗ್ಲಾದೇಶದ ಸೈನಿಕರಲ್ಲೇ ಕೆಲವರು ಸಹಾಯ ಮಾಡಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯಲ್ಲೇ ತಿಳಿದುಬಂದಿದೆ. ಬಂಧಿತರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು ಅವರು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಎಸ್​ಎಫ್​ ಮೂಲಗಳು ತಿಳಿಸಿವೆ.

ಅದೇ ರೀತಿ ಇನ್ನೊಂದು ಪ್ರಕರಣದಲ್ಲಿ ನಾಲ್ವರು ಭಾರತೀಯರನ್ನು ಬಂಧಿಸಲಾಗಿದ್ದು, ಇವರೆಲ್ಲ ಮಂಗಳವಾರ ರಾತ್ರಿ ಕಾನೂನು ಬಾಹಿರವಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬರಲು ಯತ್ನಿಸಿದರು ಎಂದು ಬಿಎಸ್​ಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *