ನಾಲ್ಕು ನಿಮಿಷದಲ್ಲಿ ನಿರ್ನಾಮ, ನಾಲ್ಕು ದಶಕದ ಮಾಫಿಯಾ; ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಪ್ರಯಾಗ್​ರಾಜ್/ಲಖನೌ: ಕುಖ್ಯಾತ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸೋದರ ಅಶ್ರಫ್ ಶನಿವಾರ ರಾತ್ರಿ ಪ್ರಯಾಗ್​ರಾಜ್​ನಲ್ಲಿ ದುಷ್ಕರ್ವಿುಗಳ ಗುಂಡಿಗೆ ಬಲಿಯಾಗುವುದರೊಂದಿಗೆ ಸುಮಾರು ನಾಲ್ಕು ದಶಕ ಕಾಲ ಉತ್ತರ ಪ್ರದೇಶವನ್ನು ನಡುಗಿಸಿದ್ದ ಮಾಫಿಯಾ ಸಾಮ್ರಾಜ್ಯ ನಾಲ್ಕೇ ನಿಮಿಷದಲ್ಲಿ ಮಣ್ಣುಮುಕ್ಕಿದೆ. 18ರ ಹರೆಯದಲ್ಲಿ ಮೊದಲ ಕೊಲೆ ಮಾಡಿ ಪಾತಕ ಜಗತ್ತಿಗೆ ಕಾಲಿಟ್ಟ ಅತೀಕ್, ಸುಮಾರು 42 ವರ್ಷ ಕಾಲ ಲೆಕ್ಕವಿಲ್ಲದಷ್ಟು ಕೊಲೆ ಸುಲಿಗೆ ಮಾಡಿ ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿ ಆತಂಕ ಮೂಡಿಸಿದ್ದ. ಆತನ ಆಟಾಟೋಪ 60ನೇ ವಯಸ್ಸಿನಲ್ಲಿ ಅಂತ್ಯಗೊಂಡು … Continue reading ನಾಲ್ಕು ನಿಮಿಷದಲ್ಲಿ ನಿರ್ನಾಮ, ನಾಲ್ಕು ದಶಕದ ಮಾಫಿಯಾ; ಆರೋಪಿಗಳು ನ್ಯಾಯಾಂಗ ಬಂಧನಕ್ಕೆ