ಬೆಂಗಳೂರು: ರಸಿಲ್ದಾರ್ ಸ್ಟ್ರೀಟ್‌ನಲ್ಲಿ ನಡೆದಿದ್ದ ಅಜಿತ್ ಕುಮಾರ್ (27) ಕೊಲೆ ಪ್ರಕರಣ ಸಂಬಂಧ ಶೇಷಾದ್ರಿಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶೇಷಾದ್ರಿಪುರದ ನರಸಿಂಹನ್, ಅಜಯ್, ಪ್ರಕಾಶ್ ಮತ್ತು ಅರುಣ್ ಬಂಧಿತರು. ಆ.1ರ ಮಧ್ಯಾಹ್ನ 4.15ರಲ್ಲಿ ಅಜಿತ್ ಕುಮಾರ್ ಮನೆಯಿಂದ ಹೊರಗೆ ಬಂದಾಗ ಮಾರಕಾಸದಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಮೂರ್ತಿನಗರದ ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್, ರಸಿಲ್ದಾರ್ ಸ್ಟ್ರೀಟ್‌ನಲ್ಲಿ ಕುಟುಂಬದ ಜೊತೆಗೆ ನೆಲೆಸಿದ್ದ. 2022ರಲ್ಲಿ ಅಜಿತ್ ಮತ್ತು ಆರೋಪಿ ನರಸಿಂಹನ್ ಪುತ್ರ ಗಣೇಶ್ ಎಂಬಾತನ ನಡುವೆ ಹಾಲು ಮಾರಾಟದ ವಿಚಾರವಾಗಿ ಜಗಳ ನಡೆದಿತ್ತು.
ಇದೇ ವಿಚಾರಕ್ಕೆ ಗಣೇಶ್‌ನನ್ನು ಅಜಿತ್ ಕೊಲೆ ಮಾಡಿ ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಹೊರ ಬಂದ ಮೇಲೆ ಅಜಿತ್, ಏರಿಯಾದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ. ಇತ್ತ ಹಳೆಯ ದ್ವೇಷಕ್ಕಾಗಿ ನರಸಿಂಹನ್ ಮತ್ತು ಇತರ ಆರೋಪಿಗಳು ಹೊಂಚು ಹಾಕಿ ಅಜಿತ್‌ನ್ನು ಕೊಲೆ ಮಾಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.