ಆನಂದ್: ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಭಾರತದ ಮೊದಲ ಸಹಕಾರಿ ರಾಷ್ಟ್ರೀಯ ವಿಶ್ವವಿದ್ಯಾಲಯ ನಿಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ನೀರು ಮತ್ತು ಭೂ ನಿರ್ವಹಣಾ ಸಂಸ್ಥೆಯ (ವಾಲ್ಮಿ) ಆವರಣದಲ್ಲಿ ಶಂಕುಸ್ಥಾಪನೆ ನಡೆಯಿತು. ಭಾರತದಲ್ಲಿ ಸಹಕಾರಿ ಚಳವಳಿಯ ಪ್ರವರ್ತಕ, ಅಮುಲ್ ಸ್ಥಾಪನೆ ಹಿಂದಿನ ಪ್ರಮುಖ ವ್ಯಕ್ತಿ ತ್ರಿಭುವನದಾಸ್ ಕಿಶಿಭಾಯ್ ಪಟೇಲ್ ಹೆಸರನ್ನು ಈ ವಿವಿಗೆ ಇಡಲಾಗಿದೆ.
ಸಹಕಾರಿ ಸಂಸ್ಥೆಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ, ನಾವೀನ್ಯತೆ ಮತ್ತು ಕೈಗೆಟುಕುವ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದ ಸಂಶೋಧನೆ-ಅಭಿವೃದ್ಧಿ ಬೆಂಬಲಿಸಲು ಭಾರತದಲ್ಲಿ ಪ್ರಸ್ತುತ ಯಾವುದೇ ಸಾಂಸ್ಥಿಕ ಕಾರ್ಯವಿಧಾನವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಸಹಕಾರಿ ವಲಯದಲ್ಲಿ ಸಂಶೋಧನೆ-ಅಭಿವೃದ್ಧಿ ಕೈಗೊಳ್ಳಲು ಮತ್ತು ಅದನ್ನು ಉತ್ತೇಜಿಸಲು ವಿಶ್ವವಿದ್ಯಾಲಯದಲ್ಲಿ ಮೀಸಲಾದ ಸಂಶೋಧನೆ-ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ತ್ರಿಭುವನ್ ಸಹಕಾರಿ ವಿವಿ ಪಿಎಚ್ಡಿ, ಪದವಿ, ಮೇಲ್ವಿಚಾರಣಾ ಮಟ್ಟದ ಡಿಪ್ಲೊಮಾ ಮತ್ತು ಕಾರ್ಯåಚರಣೆಯ ಮಟ್ಟದಲ್ಲಿ ಪ್ರಮಾಣಪತ್ರಗಳನ್ನು ನೀಡಲಿದೆ.