ಭಾಲ್ಕಿ: ಜಗತ್ತಿಗೆ ಹಿಂದು ಮಂತ್ರವೇ ದಾರಿದೀಪವಾಗಿದೆ. ಹಿಂದು ಇಲ್ಲದೇ ಜಗದಾಟ ನಡೆಯದು ಎಂದು ಸಾಮಾಜಿಕ ಕಾರ್ಯಕರ್ತೆ ಕಾಜೋಲ್ ಹಿಂದುಸ್ತಾನಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಶ್ವ ಹಿಂದು ಪರಿಷತ್ ಸಂಸ್ಥಾಪನಾ ದಿನ ನಿಮಿತ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಸಂಸ್ಥಾಪನಾರ್ಥ ಜನ್ಮ ತಾಳಿದ ಕೃಷ್ಣನಿಂದ ಧರ್ಮ ಸ್ಥಾಪನೆಯಾಗಿದೆ. ವಿಶ್ವಕ್ಕೆ ಹಿಂದು ಧರ್ಮವೇ ಮಾರ್ಗದರ್ಶಿಯಾಗಿದೆ. ಸ್ವಾಮಿ ವಿವೇಕಾನಂದರು ಸೇರಿ ಅನೇಕ ದಾರ್ಶನಿಕರು ಹಿಂದು ಧರ್ಮದ ಬಗ್ಗ ಜಗತ್ತಿಗೆ ಪಾಠ ಹೇಳಿದ್ದಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ಹಿಂದು ಧರ್ಮ ಮುನ್ನಡೆಗೆ ಬಂದಿದೆ ಎಂದು ಹೇಳಿದರು.
ಸಾನ್ನಿಧ್ಯವಹಿಸಿದ್ದ ಹಲಬರ್ಗಾ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಜಗತ್ತಿಗೆ ಶಾಂತಿ ಮಂತ್ರ ಹೇಳುವ ಧರ್ಮ ಅದ್ಯಾವುದಾದರೂ ಇದ್ದರೆ ಅದು ಹಿಂದು ಧರ್ಮವಾಗಿದೆ ಎಂದು ಹೇಳಿದರು.
ಜೈ ಭಾರತ ಮಾತಾ ಸೇವಾ ಸಮಿತಿಯ ಶ್ರೀ ಹವಾ ಮಲ್ಲಿನಾಥ ಸ್ವಾಮೀಜಿ ಮಾತನಾಡಿ, ಎಲ್ಲರಲ್ಲಿಯೂ ದೇಶ ಪ್ರೇಮ ಬೆಳೆಯಬೇಕಾದರೆ ಹಿಂದು ರಾಷ್ಟçದಲ್ಲಿ ಹಿಂದುಗಳಾಗಿ ಬಾಳಬೇಕು ಎಂದು ಹೇಳಿದರು.
ಪರಿಷತ್ ತಾಲೂಕು ಅಧ್ಯಕ್ಷ ಸಾಗರ ಮಲಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪ್ರತಿನಿಧಿ ಜೈಕಿಶ್ ಬಿಯಾನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಶುಭಾಂಗಿ ಚನ್ನಬಸವ ಬಳತೆ, ಶಿವಕುಮಾರ ಲೋಖಂಡೆ, ಸಂದೀಪ ತೆಲಗಾಂವಕರ, ರಾಜೆಪ್ಪ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಬಿಜೆಪಿ ಮುಖಂಡ ಪ್ರಸನ್ನ ಪ್ರಕಾಶ ಖಂಡ್ರೆ, ಶಿವರಾಜ ಗಂದಗೆ, ಚನ್ನಬಸವಣ್ಣ ಬಳತೆ, ಶಾಲಿವಾನ ಕನಕಟ್ಟೆ, ಜೆಡಿಎಸ್ ಮುಖಂಡ ಸಿದ್ರಾಮಪ್ಪ ವಂಕೆ, ಶಿವರಾಜ ಮಲ್ಲೇಶಿ, ರಾಜಕುಮಾರ ತೊಗಲೂರ, ಇಂದ್ರಜೀತ ಪಾಂಚಾಳ, ಸಂಗಮೇಶ ಕಾರಾಮುಂಗೆ ಇತರರಿದ್ದರು.
ದೀಪಕ ಥಮಕೆ ನಿರೂಪಣೆ ಮಾಡಿದರು. ಸಚಿನ ಜಾಧವ್ ವಂದಿಸಿದರು.