ಲಕ್ಷಾಂತರ ವರ್ಷಗಳ ಪಳೆಯುಳಿಕೆ

ಹಳೆಯ ಪಳೆಯುಳಿಕೆಗಳು ಯಾವಾಗಲೂ ಅಚ್ಚರಿ ಮೂಡಿಸುತ್ತವೆ. ಇತ್ತೀಚೆಗೆ ಹಿಂದು ಮಹಾಸಾಗರದ ದ್ವೀಪಪ್ರದೇಶದಲ್ಲಿ ಒಂದು ಲಕ್ಷದ ಮೂವತ್ತಾರು ಸಾವಿರ ವರ್ಷಗಳ ಹಿಂದಿನ ಪಕ್ಷಿಯ ತಳಿ ಅಲ್ಡಾಬ್ರಾ ಪತ್ತೆಯಾಗಿದೆ.

ಲಕ್ಷಾಂತರ ವರ್ಷಗಳ ಹಿಂದೆ ಈ ಹಕ್ಕಿಗಳು ಈ ದ್ವೀಪಪ್ರದೇಶದಲ್ಲಿ ವಾಸವಾಗಿದ್ದವು ಎನ್ನಲಾಗಿದೆ. ಒಮ್ಮೆ ಭೀಕರ ಪ್ರವಾಹದಲ್ಲಿ ಈ ಹಕ್ಕಿಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದವು. ಇಂಗ್ಲೆಂಡ್​ನ ಪೋರ್ಟ್ಸ್​ಮೌಥ್ ವಿಶ್ವವಿದ್ಯಾಲಯ ಹಾಗೂ ನಾುಚುರಲ್ ಹಿಸ್ಟರಿ ಮ್ಯೂಸಿಯಂನ ಸಂಶೋಧಕರು ಈ ಸಂಶೋಧನೆಯಲ್ಲಿ ತೊಡಗಿದ್ದಾರೆ.