ಸಿನಿಮಾ

ಬೆಳಗಾವಿ ಸುವರ್ಣ ಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ


ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿಯೇ‌ ನೂತನ ಸರ್ಕಾರದ ಸಚಿವರು, ಶಾಸಕರು ‌ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ನಡೆಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರು  ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಚನಾಯಿತರಾದ ನೂತನ ಶಾಸಕರ ಶಪಥ ಕಾರ್ಯಕ್ರಮವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಾರ್ಯಕ್ರಮ ಜರುಗಿಸುವುದರೊಂದಿಗೆ ಮತ್ತು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಈ‌ ವಿಧಾನಸಭೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಚೆನ್ನಮ್ಮಾಜಿಗೆ ಸಮರ್ಪಣೆ ಮಾಡುವುದರೊಂದಿಗೆ ಈ‌ ಭಾಗದ ಅಭಿವೃದ್ಧಿ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಚುನಾಯಿತ ಜನಪ್ರತಿನಿಧಿಗಳು ಈ ವಿಧಾನಸಭಾ ಮುಂದಿನ 5 ವರ್ಷ ಭ್ರಷ್ಟಾಚಾರ ‌ಮುಕ್ತ‌ ಮತ್ತು ರೈತ ಪರ ಆಡಳಿತ‌ ನೀಡಲು ಶಪಥ ಕೈಗೊಳ್ಳಬೇಕು ಇಲ್ಲದಿದ್ದರೇ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ರೈತ ಮುಖಂಡ ಸೋಮು ರೈನಾಪೂರ, ರವೀಂದ್ರ ಸೂಪಣ್ಣವರ, ಮಾಧವರಾವ್ ರಾಣೆ, ವಿಶ್ವನಾಥ ಕೆ, ರಂಗಪ್ಪ ಗಂಗಾರಡ್ಡಿ, ಶೇಖರ ತೀಲಾರಿ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Latest Posts

ಲೈಫ್‌ಸ್ಟೈಲ್