More

    ಸರ್ಕಾರದಿಂದ ರೈತರಿಗೆ ನೀಡುವ ಪರಿಹಾರ ತಡವಾದರೂ ಪರಿಹಾರ ಸಿಕ್ಕೇ ಸಿಗಲಿದೆ

    ಚಿಕ್ಕನಾಯಕನಹಳ್ಳಿ:ಎತ್ತಿನಹೊಳೆ ಯೋಜನೆ ಭೂ ಸ್ವಾಧೀನಕ್ಕಾಗಿ 100 ಕೋಟಿ ರೂಪಾಯಿ ಮೀಸಲಿರಿಸಿದ್ದು, ಸ್ವಲ್ಪ ತಡವಾದರೂ ರೈತರಿಗೆ ವಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿನ ಪರಿಹಾರವನ್ನು ಸರ್ಕಾರ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ ಹೇಳಿದರು.
    ಗೋಡೆಕೆರೆ ಗೇಟ್‌ನ ತೂಬರೇಹಳ್ಳಿ ರಸ್ತೆಯ ಬಳಿ ಮಂಗಳವಾರ ಎತ್ತಿನಹೊಳೆಯ 20ನೇ ಪ್ಯಾಕೇಜ್ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

    ಸರ್ಕಾರದಿಂದ ರೈತರಿಗೆ ನೀಡುವ ಪರಿಹಾರ ಸ್ವಲ್ಪ ತಡವಾದರೂ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ ಕಂಟ್ರಾಕ್ಟರ್ ಹಾಗೂ ರೈತರು ವಾಡಿ
    ಕೊಂಡಿರುವ ಒಪ್ಪಂದಕ್ಕೆ ನಾನು ಜವಾಬ್ದಾರನಲ್ಲ. ಮರಗಳಿಗೆ ಪರಿಹಾರ ನೀಡಿದರೆ ಜಮೀನು ಬಿಟ್ಟು ಕೊಡಲು ರೈತರು ಒಪ್ಪಿಗೆ ನೀಡಿದ್ದರು. ಅದರಂತೆ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು. ಇನ್ನು 2 ವರ್ಷ ನಡೆಯುವ ಕಾಮಗಾರಿಯಿಂದ ಈ ಭಾಗದ ರೈತರಿಗೂ ಅನುಕೂಲವಾಗಲಿದೆ ಎಂದರು.ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷ ಪ್ರಸನ್ನಕುವಾರ್ ವಾತನಾಡಿ, ಸಚಿವರು ರೈತರಿಗೆ ಸರಿಯಾದ ಪರಿಹಾರ ಕೊಡಿಸುತ್ತಾರೆ ಎಂಬ ನಂಬಿಕೆಯಿಂದ ಕಾಮಗಾರಿ ವಾಡಲು ನಮ್ಮ ಭಾಗದ ರೈತರು ಒಪ್ಪಿದ್ದಾರೆ ಎಂದರು.

    ಜೆ.ಸಿ.ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ, ತಾಪಂ ಸದಸ್ಯ ಕೇಶವಮೂರ್ತಿ, ವಾಜಿ ಸದಸ್ಯ ನಿರಂಜನ್, ಎಪಿಎಂಸಿ ವಾಜಿ ಅಧ್ಯಕ್ಷ ಶಿವರಾಜು, ತುಮುಲ್ ನಿರ್ದೇಶಕ ಹಳೆಮನೆ ಶಿವನಂಜಪ್ಪ, ಮಖಂಡರಾದ ಗೋವಿಂದರಾಜು, ರವಿ, ಕಾಶಿನಾಥ್ ಜೆ.ಸಿ.ಪುರ ಪಿಡಿಒ
    ಕೋಕಿಲಾ ಮತ್ತಿತರರು ಇದ್ದರು.

    ಒಟ್ಟು 5.3 ಕಿ.ಮೀ ಕಾಮಗಾರಿ:140 ರಿಂದ 146 ಎತ್ತಿನಹೊಳೆ ಚೈನ್ ಕಾಮಗಾರಿಯು ಇದಾಗಿದ್ದು, ಒಟ್ಟು 5.3 ಕಿ.ಮೀ ಉದ್ದದ ಕಾಮಗಾರಿ ನಡೆಯಲಿದೆ. 3.83 ಕಿ.ಮೀ ಗುರುತ್ವಾಕರ್ಷಣೆಯ ಮೂಲಕ 1.47 ಕಿ.ಮೀ ಎತ್ತರಿಸಿದ ಕಾಲುವೆ ಮಾರ್ಗದಲ್ಲಿ ನೀರು ಹರಿಯುತ್ತದೆ. ಶ್ರೀಶಂಕರ್ ಕಂಪನಿ ಗುತ್ತಿಗೆ ವಹಿಸಲಾಗಿದ್ದು, ಕಾಮಗಾರಿ ಜೆ.ಸಿ.ಪುರ, ಬೈರಗಾನಹಳ್ಳಿ, ತರಬೇನಹಳ್ಳಿ, ನಡುವನಹಳ್ಳಿ, ಗೋಡೆಕೆರೆ ಭಾಗದ ಮೂಲಕ ಸಾಗುತ್ತದೆ ಎಂದು ಎತ್ತಿನಹೊಳೆ 20ನೇ ಪ್ಯಾಕೇಜ್‌ನ ಎಇಇ ಸುರೇಶ್ ಮೇಟಿ ವಿವರಿಸಿದರು.

    ರೈತರು ಸಹಕರಿಸಬೇಕು: ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಭಾಗಕ್ಕೆ ಎತ್ತಿನಹೊಳೆ ಯೋಜನೆಯಿಂದ ನೀರಿನ ಹಂಚಿಕೆಯಾಗಿಲ್ಲ ಎಂಬ ಕಾರಣದಿಂದ ಯೋಜನೆಗೆ ನನ್ನ ವಿರೋಧವಿತ್ತು. ಆದರೆ ಸರ್ಕಾರದಿಂದ 1.57 ಟಿಎಂಸಿ ನೀರನ್ನು ಹಂಚಿಕೆ ವಾಡಿದ ನಂತರ ಕಾಮಗಾರಿಗೆ ಒಪ್ಪಿಗೆ ನೀಡಿದ್ದೆ. 96 ಕೆರೆಗಳಿಗೆ ನೀರು ಹರಿಸಲು 290 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಎತ್ತಿನ ಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ನಡೆಯಲು ರೈತರು ಸಹಕರಿಸಬೆಕು ಎಂದು ಮಾಧುಸ್ವಾಮಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts