ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಬಾದಾಮಿ: ನೀಲಗುಂದ ಗ್ರಾಮದ ರೈತ ಶಿವನಗೌಡ ಕೃಷ್ಣಗೌಡ ಓದುಗೌಡರ (56) ಸಾಲಬಾಧೆ ತಾಳದೆ ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಲಗುಂದದ ಕರ್ನಾಟಕ ವಿಕಾಸ ಬ್ಯಾಂಕ್​ನಲ್ಲಿ 1.10ಲಕ್ಷ , ಪಿಕೆಪಿಎಸ್​ನಲ್ಲಿ 50 ಸಾವಿರ, ಬಾಗಲಕೋಟೆ ನಬಾರ್ಡ್ ಬ್ಯಾಂಕ್​ನಲ್ಲಿ 50 ಸಾವಿರ, ಗ್ರಾಮೀಣ ಕೂಟ ಬ್ಯಾಂಕ್​ನಲ್ಲಿ 75ಸಾವಿರ ಹಾಗೂ ಗ್ರಾಮದಲ್ಲಿ ಕೈಗಡ 1ಲಕ್ಷ ರೂ. ಸಾಲ ಮಾಡಿದ್ದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಬಾದಾಮಿ ಪಿಎಸ್​ಐ ಎಚ್.ಎಸ್. ನಡಗಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.