ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮುಂಬರುವ ಐಪಿಎಲ್ 18ನೇ ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಫ್ರಾಂಚೈಸಿ ಸೋಮವಾರ ಅಧಿಕೃತವಾಗಿ ಪ್ರಕಟಿಸಿದ್ದು, ಈ ಮೂಲಕ ಡೆಲ್ಲಿ ಈ ಬಾರಿ ಹೊಸ ನಾಯಕ, ಹೊಸ ತರಬೇತಿ ಬಳಗದೊಂದಿಗೆ ಸಂಪೂರ್ಣವಾಗಿ ಬದಲಾವಣೆಗೊಂಡಿದೆ.
2022ರಿಂದ 2024ರವರೆಗೆ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಎರಡು ಬಾರಿ ಪ್ಲೇಆ್ಗೇರಿಸಿದ್ದ 40 ವರ್ಷದ ಡು ಪ್ಲೆಸಿಸ್, 42 ಪಂದ್ಯಗಳಲ್ಲಿ 21&21 ಸೋಲು&ಗೆಲುವಿನ ದಾಖಲೆ ಹೊಂದಿದ್ದಾರೆ. ನಂತರ ಆರ್ಸಿಬಿ ತಂಡದಿಂದ ಕೈಬಿಟ್ಟ ಬಳಿಕ ಮೆಗಾ ಹರಾಜಿನಲ್ಲಿ ಮೂಲಬೆಲೆ <2 ಕೋಟಿಗೆ ಡೆಲ್ಲಿ ತಂಡ ಸೇರಿದ್ದರು. ಉಪನಾಯಕನಾಗಿ ನೇಮಕಗೊಂಡ ಬಳಿಕ ಡು ಪ್ಲೆಸಿಸ್ ಹನ್ನೊಂದರ ಬಳಗದಲ್ಲೂ ಸ್ಥಾನ ಖಾತ್ರಿಪಡಿಸಿಕೊಂಡಿದ್ದು, ಕನ್ನಡಿಗ ಕೆಎಲ್ ರಾಹುಲ್ ಜತೆಯಾಗಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಮಾ.24ರಂದು ಲಖನೌ ಸೂಪರ್ಜೈಂಟ್ಸ್ ಎದುರು ಕಣಕ್ಕಿಳಿಯುವ ಮೂಲಕ ಡೆಲ್ಲಿ ತಂಡ ತನ್ನ ಅಭಿಯಾನ ಆರಂಭಿಸಲಿದೆ.
ಉಮ್ರಾನ್ ಬದಲಿಗೆ ಕೆಕೆಆರ್ ಸೇರಿದ ಸಕಾರಿಯಾ
ಪದೆ ಪದೇ ಸಂಭವಿಸುತ್ತಿರುವ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಲವಾಗಿರುವ ವೇಗಿ ಉಮ್ರಾನ್ ಮಲಿಕ್ ಐಪಿಎಲ್ 18ನೇ ಆವೃತ್ತಿಯಿಂದ ಹೊರಬಿದ್ದಿದ್ದು,ಅವರ ಬದಲಿಗೆ ಎಡಗೈ ವೇಗದ ಬೌಲರ್ ಚೇತನ್ ಸಕಾರಿಯಾ ಕೆಕೆಆರ್ ತಂಡ ಸೇರ್ಪಡೆಗೊಂಡಿದ್ದಾರೆ.ಹಾಲಿ ಚಾಂಪಿಯನ್ ಕೆಕೆಆರ್ ಮೂಲಬೆಲೆ 75 ಲಕ್ಷ ನೀಡಿ ಮೆಗಾ ಹರಾಜಿನಲ್ಲಿ ಮಲಿಕ್ರನ್ನು ಖರೀದಿಸಿತ್ತು. ಕಳೆದ ವರ್ಷದ ಚಾಂಪಿಯನ್ ತಂಡದ ಸದಸ್ಯನಾಗಿದ್ದ 27 ವರ್ಷದ ಸಕರಿಯಾ ಮೆಗಾ ಹರಾಜಿನಲ್ಲಿ ಅವರು ಮಾರಾಟವಾಗದೆ ಉಳಿದಿದ್ದರು, ಸದ್ಯ 75 ಲಕ್ಷಕ್ಕೆ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಸಕರಿಯಾ ಮೂರು ಋತುಗಳಲ್ಲಿ 19 ಐಪಿಎಲ್ ಪಂದ್ಯಗಳನ್ನು ಆಡಿದ್ದು, 8.43ರ ಎಕಾನಮಿಯಲ್ಲಿ 20 ವಿಕೆಟ್ಕಬಳಿಸಿದ್ದಾರೆ.