ರಾಜೀವ್​ಗಾಂಧಿಯವರ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸೋನಿಯಾ ಸೌಂದರ್ಯ!

ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರು ಅತ್ಯುತ್ತಮ ನಾಯಕರು. ಹಾಗೇ ಅವರೊಬ್ಬ ಕೌಶಲವುಳ್ಳ ಛಾಯಾಗ್ರಾಹಕರೂ ಕೂಡ. ಈ ವಿಷಯ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಸೋನಿಯಾ ಗಾಂಧಿಯವರ ಕೆಲವು ಹಳೇ ಫೋಟೋಗಳು ರಾಜೀವ್​ ಗಾಂಧಿಯವರ ಛಾಯಾಗ್ರಹಣ ಕೌಶಲಕ್ಕೆ ಸಾಕ್ಷಿಯಾಗಿವೆ.

ಕಾಂಗ್ರೆಸ್​ ಪಕ್ಷ ತನ್ನ ಇನ್​ಸ್ಟಾಗ್ರಾಂನಲ್ಲಿ ಗುರುವಾರ ಸೋನಿಯಾ ಗಾಂಧಿಯವರ ಒಂದೆರಡು ಹಳೇ ಫೋಟೋಗಳನ್ನು ಶೇರ್​ ಮಾಡಿದ್ದು, ರಾಜೀವ್​ ಗಾಂಧಿಯವರ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸೋನಿಯಾ ಗಾಂಧಿಯವರ ಸೊಬಗು ಸೌಂದರ್ಯ ಎಂದು ಅಡಿಬರಹ ನೀಡಿದೆ.

ಈ ಫೋಟೋ ತುಂಬ ಹಳೆಯದು. ಆಗಿನ್ನೂ ಸೋನಿಯಾ ಗಾಂಧಿಯವರು ರಾಜಕೀಯಕ್ಕೆ ಇಳಿದಿರಲಿಲ್ಲ. ಪಕ್ಷದ ಜವಾಬ್ದಾರಿಯನ್ನೂ ಹೊತ್ತಿರಲಿಲ್ಲ. ಈಗಿನ ತಲೆಮಾರಿನವರು ಸೋನಿಯಾ ಗಾಂಧಿಯವರನ್ನು ಕಾಟನ್​ ಸೀರೆ ಬಿಟ್ಟು ಇನ್ಯಾವುದೇ ಉಡುಪಿನಲ್ಲಿ ನೋಡಿಲ್ಲ. ಆದರೆ, ಈ ಫೋಟೋದಲ್ಲಿ ಸೋನಿಯಾ ಪಾಶ್ಚಾತ್ಯ ಉಡುಪು ಧರಿಸಿದ್ದರು.

ತುಟಿಗಳಿಗೆ ಲಿಪ್​ಸ್ಟಿಕ್​ ಹಚ್ಚಿಕೊಂಡು, ಉದ್ದನೆಯ ಕಪ್ಪು ಕೂದಲನ್ನು ಹಾಗೇ ಹರಿಬಿಟ್ಟಿರುವ ಸೋನಿಯಾ ಸಣ್ಣದಾಗಿ ನಗುತ್ತಿರುವ ಫೋಟೋ ಇದಾಗಿದೆ. ಅವರ ಮುಖದಲ್ಲಿ ಸಂತೋಷ ಮೇಳೈಸಿದೆ.

ಸೋನಿಯಾ ಗಾಂಧಿ ಹಾಗೂ ರಾಜೀವ್​ ಗಾಂಧಿ 1968 ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ನಂತರ 1970ರಲ್ಲಿ ರಾಹುಲ್​ ಹಾಗೂ 1972ರಲ್ಲಿ ಪ್ರಿಯಾಂಕಾ ಜನಿಸಿದ್ದಾರೆ.
991ರಲ್ಲಿ ರಾಜೀವ್​ ಗಾಂಧಿ ಮೃತಪಟ್ಟ ಬಳಿಕ ಸೋನಿಯಾ ಗಾಂಧಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ.