Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಅಜಾತಶತ್ರು ಅಜರಾಮರ

Friday, 17.08.2018, 3:05 AM       No Comments

‘ಸಾವನ್ನು ಎದುರಿಸುವುದು ನಿಶ್ಚಿತ, ಸಾವಿನ ಜತೆ ಸೆಣಸುವ ಉದ್ದೇಶ ಇರಲಿಲ್ಲ. ಜೀವಕ್ಕಿಂತ ತಾನೇ ದೊಡ್ಡವನೆಂದು ಸಾವು ನನ್ನನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಹೋರಾಟವಿಲ್ಲದೆ ನಾನು ಜೀವ ಬಿಡಲಾರೆ’-1988ರಲ್ಲಿ ಬರೆದ ‘ಠನ್ ಗಯಿ, ಮೌತ್ ಸೇ ಠನ್ ಗಯಿ’ ಎಂಬ ತಮ್ಮ ಕವನದ ಸಾಲಿನಂತೆ ಜೀವನದ ಕೊನೆಯ ಕ್ಷಣದವರೆಗೂ ಸಾವಿನ ಜತೆ ಹೋರಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಿಮವಾಗಿ ಕಾಲನ ಕರೆಗೆ ಓಗೊಟ್ಟಿದ್ದಾರೆ. ಅಜಾತಶತ್ರುವಾಗಿ, ಕವಿ ಹೃದಯಿಯಾಗಿ, ನವಭಾರತ ನಿರ್ವಣಕ್ಕಾಗಿ ದುಡಿದ ‘ಭಾರತ ರತ್ನ’ ಇನ್ನು ಕೇವಲ ನೆನಪು. ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಮೂಡಿಸಿದ್ದ ವಾಜಪೇಯಿ ಗುರುವಾರ ಸಂಜೆ ಕೊನೆಯುಸಿರೆಳೆದರು.

ಆಸ್ಪತ್ರೆಯಲ್ಲಿನ ಆ 65 ದಿನ…

2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ವಾಜಪೇಯಿಯವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ.11ರಂದು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್​ಗೆ ದಾಖಲಿಸಲಾಯಿತು. ಕಳೆದ ವಾರದಿಂದೀಚೆಗೆ ಪರಿಸ್ಥಿತಿ ಗಂಭೀರವಾದಾಗ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಗುರುವಾರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರದ ಪ್ರಮುಖ ಸಚಿವರು ಆಸ್ಪತ್ರೆಗೆ ತೆರಳಿ ವೈದ್ಯರೊಂದಿಗೆ ಸಮಾಲೋಚಿಸಿದ್ದರು. ಉಸಿರಾಟದ ತೊಂದರೆ, ಮೂತ್ರಪಿಂಡ ಸೋಂಕಿನ ಜತೆಗೆ ಡಯಾಬಿಟಿಸ್ ವಾಜಪೇಯಿ ಅವರನ್ನು ಮತ್ತಷ್ಟು ಹೈರಾಣಾಗಿಸಿತು. ಅಂತಿಮವಾಗಿ ಗುರುವಾರ ಸಂಜೆ 5 ಗಂಟೆಗೆ ಏಮ್್ಸ ಪ್ರಕಟಣೆ ವಾಜಪೇಯಿ ನಿಧನ ಸುದ್ದಿಯನ್ನು ಬಿತ್ತರಿಸಿತು.

ಅಜಾತಶತ್ರು

ಭಾರತ ರಾಜಕಾರಣಿಗಳ ಸಾಲಿನಲ್ಲಿ ವಾಜಪೇಯಿ ಹೆಸರು ವಿಶೇಷವಾಗಿ ನಿಲ್ಲಲು ಅವರ ಸ್ನೇಹಗುಣವೇ ಕಾರಣ ಎಂಬುದನ್ನು ವಿಪಕ್ಷ ನಾಯಕರೂ ಒಪು್ಪತ್ತಾರೆ. ಬಿಜೆಪಿ ನಾಯಕನಾಗಿ ವಾಜಪೇಯಿ ಅವರನ್ನು ಸಂಸತ್ ಒಳಗೆ, ಹೊರಗೆ ವಿರೋಧಿಸುತ್ತಿದ್ದವರು ಹೊರಗೆ ಅವರ ಸ್ನೇಹಕ್ಕೆ ಅಷ್ಟೇ ಹಾತೊರೆಯುತ್ತಿದ್ದರು. ಕಾಂಗ್ರೆಸ್ ಅದಿಯಾಗಿ ಎಲ್ಲ ಪಕ್ಷಗಳಲ್ಲೂ ಅವರ ಸ್ನೇಹಬಳಗವಿತ್ತು. ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರಂತೂ, ‘ಮುಂದೊಂದು ದಿನ ವಾಜಪೇಯಿ ಈ ದೇಶದ ಪ್ರಧಾನಿಯಾಗಲಿದ್ದಾರೆ’ ಎಂದು 50ರ ದಶಕದಲ್ಲೇ ಭವಿಷ್ಯ ನುಡಿದಿದ್ದರು.

ಅಟಲ್ ನುಡಿಮುತ್ತು…

ಭಾರತ! ಇದು ವಂದನೆಯ ಭೂಮಿ. ಅಭಿನಂದನೆಯ

ಭೂಮಿ. ಅರ್ಪಣೆಯ ಭೂಮಿ. ತರ್ಪಣೆಯ ಭೂಮಿ.

ಇದರ ಕಲ್ಲು-ಕಲ್ಲಿನಲ್ಲಿ ಶಂಕರನಿದ್ದಾನೆ; ಹನಿ-ಹನಿಯಲ್ಲೂ ಗಂಗೆ.

ನಾವು ಬದುಕುವುದು ಇದಕ್ಕಾಗಿ, ಸಾಯುವುದೂ ಇದಕ್ಕಾಗಿಯೇ!

ಸತ್ತ ನಂತರವೂ ಗಂಗಾನದಿಯಲ್ಲಿ ಹರಿಯುವ

ನಮ್ಮ ಅಸ್ಥಿಯ ಬಳಿ ಕಿವಿಗೊಟ್ಟು ಕೇಳಿದರೆ

ಅಲ್ಲಿಂದ ಬರುವ ಧ್ವನಿ ಒಂದೇ…

ಅದು… ಭಾರತ್ ಮಾತಾ ಕೀ ಜೈ!

 

ಡಾ. ವಿಜಯ ಸಂಕೇಶ್ವರ ಸಂತಾಪ

ವಾಜಪೇಯಿ ನಿಧನಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಸಂತಾಪ ಸೂಚಿಸಿದ್ದಾರೆ. ‘ನಾನು ಮೂರು ಬಾರಿ ಸಂಸದನಾಗಿ ಲೋಕಸಭೆಗೆ ಹೋದಾಗಲೂ ಅಟಲ್​ಜೀ ಜತೆ ಉತ್ತಮ ಒಡನಾಟ ಹೊಂದಿದ್ದೆ. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಅವರ ಬದುಕಿನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ. ವಾಜಪೇಯಿ ನಿಧನದಿಂದ ಶೂನ್ಯ ಆವರಿಸಿದಂತಾಗಿದೆ’ ಎಂದು ಡಾ.ವಿಜಯ ಸಂಕೇಶ್ವರ ಅವರು ಕಂಬನಿ ಮಿಡಿದಿದ್ದಾರೆ.

ನನಗಿಂದು ಸಂತಾಪ ಸೂಚಿಸಲು ಶಬ್ದವೇ ಇಲ್ಲದಂತಾಗಿದೆ. ನಾಯಕತ್ವ ಗುಣ, ಅತ್ಯುತ್ತಮ ವಾಕ್ಚಾತುರ್ಯ, ದೇಶಭಕ್ತಿ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾದರು. ಬರೋಬ್ಬರಿ 65 ವರ್ಷದ ಆತ್ಮೀಯ ಸ್ನೇಹ ನಮ್ಮದು. ಅವರೊಂದಿಗೆ ಕಳೆದ ನೆನಪುಗಳು ನನ್ನನ್ನು ಕಾಡುತ್ತಿವೆ.

| ಎಲ್.ಕೆ.ಆಡ್ವಾಣಿ, ಬಿಜೆಪಿ ವರಿಷ್ಠ

ಇಂದು ಅಂತ್ಯಸಂಸ್ಕಾರ

ದೆಹಲಿಯ ರಾಜ್​ಘಟ್ ಬಳಿಯ ವಿಜಯಘಾಟ್​ನಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ವಾಜಪೇಯಿ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಬಿಜೆಪಿ ಕಾರ್ಯಾಲಯಕ್ಕೆ ಪಾರ್ಥಿವ ಶರೀರ ತಂದ ಬಳಿಕ ಮಧ್ಯಾಹ್ನ 1ರಿಂದ ಅಂತಿಮಯಾತ್ರೆ ನಡೆಯಲಿದೆ.

ರಾತ್ರಿಯಿಡೀ ದರ್ಶನ

ದೆಹಲಿಯ ಅಟಲ್ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಗುರುವಾರ ರಾತ್ರಿಯಿಡೀ ಗಣ್ಯರು, ಅಭಿಮಾನಿಗಳು, ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಇಂದು ಸರ್ಕಾರಿ ರಜೆ

ಕರ್ನಾಟಕದಲ್ಲಿ ಶುಕ್ರವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ನ್ಯಾಯಾಲಯಗಳ ಜತೆಗೆ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿದೆ. ಶುಕ್ರವಾರ ನಡೆಯಬೇಕಿದ್ದ ಬೆಂಗಳೂರು ವಿವಿಯ ಪಿಜಿ ಕೌನ್ಸೆಲಿಂಗ್ ಮುಂದೂಡಲಾಗಿದೆ. ಅದೇ ರೀತಿ 17, 18ರಂದು ನಡೆಯಬೇಕಿದ್ದ ಬೆಂಗಳೂರು ಉತ್ತರ ವಿವಿಯ ಕೌನ್ಸೆಲಿಂಗ್ ಅನ್ನು ಕ್ರಮವಾಗಿ 18, 20ಕ್ಕೆ ನಿಗದಿಪಡಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಆ. 22ರವರೆಗೆ 7 ದಿನಗಳ ಶೋಕಾಚರಣೆ ಘೊಷಿಸಿದೆ. ಪ್ರವಾಹ ಪರಿಸ್ಥಿತಿ ಇರುವ ಕಾರಣ ಆ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ರಜೆ ಅನ್ವಯವಾಗಲಿದೆ.

ಆಲ್​ರೌಂಡರ್!

ಅಟಲ್ ಕವಿಯಾಗಿ, ಉತ್ತಮ ವಾಗ್ಮಿಯಾಗಿ, ರಾಜಧರ್ಮ ಪರಿಪಾಲಕನಾಗಿಯೂ ಉತ್ತಮ ಹೆಸರು ಗಳಿಸಿದ್ದರು. ವಾಜಪೇಯಿ ಭಾಷಣ ಎಂದರೆ ಇತರ ಪಕ್ಷಗಳ ನಾಯಕರು, ಕಾರ್ಯಕರ್ತರು ಕೂಡ ಗಂಟೆಗಟ್ಟಲೆ ಕಾದು ಕೇಳುತ್ತಿದ್ದರು.

Leave a Reply

Your email address will not be published. Required fields are marked *

Back To Top