ರೈತರ ಹಿತ ಕಾಯುವುದೇ ನಮ್ಮ ಗುರಿ

ಮುಧೋಳ: ರೈತರಿಗೆ ನೆರವಾಗುವುದು, ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ನಿರಾಣಿ ಉದ್ದಿಮೆ ಸಮೂಹದ ಮುಖ್ಯ ಗುರಿಯಾಗಿದೆ ಎಂದು ನಿರಾಣಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹನುಮಂತ ನಿರಾಣಿ ಹೇಳಿದರು.

ನಗರದ ನಿರಾಣಿ ಸಕ್ಕರೆ ಕಾರ್ಖಾನೆ 2018-19ನೇ ಹಂಗಾಮಿನ ಬಾಯ್ಲರ್ ಪ್ರದೀಪನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಜನರ ಸಹಕಾರ ಹಾಗೂ ಕಾರ್ವಿುಕರ ಶ್ರಮದಿಂದ ನಿರಾಣಿ ಉದ್ದಿಮೆ ಸಮೂಹ ರಾಷ್ಟ್ರದಲ್ಲಿಯೇ ದೊಡ್ಡ ಪ್ರಮಾಣದ ಸಕ್ಕರೆ ಉತ್ಪಾದನೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಧೋಳದ ನಿರಾಣಿ, ಹಿಪ್ಪರಗಿಯ ಸಾಯಿಪ್ರಿಯಾ ಮತ್ತು ಕಲ್ಲಾಪುರದ ಎಂಆರ್​ಎನ್ ಕಾರ್ಖಾನೆಗಳು ಪ್ರತಿದಿನ 40 ಸಾವಿರ ಟನ್​ನಷ್ಟು ಕಬ್ಬು ನುರಿಸುವ ಸಾಮರ್ಥ್ಯ ಹೊಂದಿವೆ. ಕಲ್ಲಾಪುರದ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಕಾರ್ಯಕ್ರಮ ನೆರವೇರಿದ್ದು, ನವೆಂಬರ್ ಮಧ್ಯದಲ್ಲಿ ಪೂರ್ಣ ಪ್ರಮಾಣದ ಕಬ್ಬು ನುರಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ಹೇಳಿದರು.

ಮರೆಗುದ್ದಿಯ ನಿರುಪಾದೀಶ ಸ್ವಾಮೀಜಿ, ಕೊಣ್ಣೂರ ಹೊರಗಿನಮಠದ ವಿಶ್ವಪ್ರಭು ಸ್ವಾಮೀಜಿ, ಮುಧೋಳ ಮಹಾಕಾಳಿ ದೇವಸ್ಥಾನದ ಅರ್ಚಕ ನರ್ಫತ್​ಸಿಂಗ್ ರಜಪೂತ, ಕೊಣ್ಣೂರ ಮಠದ ಸೋಮರಾಯ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಕಾರ್ಖಾನೆ ನಿರ್ದೇಶಕ ವಿಜಯ ನಿರಾಣಿ ಹಾಗೂ ಸುಷ್ಮಿತಾ ನಿರಾಣಿ ಬಾಯ್ಲರ್​ಗೆ ಪೂಜೆ ನೆರವೇರಿಸಿದರು.

ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಖಾನೆ ತಾಂತ್ರಿಕ ವಿಭಾಗದ ಮುಖ್ಯಸ್ಥ ಮುರುಗೇಶ ಹತ್ತಿಕಾಳ, ಕಬ್ಬು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಎನ್.ವಿ. ಪಡಿಯಾರ, ಗೋಪಾಲ ಗಂಗರಡ್ಡಿ ಇದ್ದರು. ಮಲ್ಲಿಕಾರ್ಜುನ ಹೆಗ್ಗಳಗಿ, ಮಲ್ಲಪ್ಪ ಪೂಜಾರಿ ನಿರೂಪಿಸಿದರು.