Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಮಾಜಿ ಸಂಸದೆ ರಮ್ಯಾರಿಂದ ಮತ್ತೊಂದು ಟ್ವೀಟ್​ ! ವಿವಾದಕ್ಕೆ ಕಾರಣವಾಯ್ತು ಪೋಸ್ಟ್​

Thursday, 30.08.2018, 1:46 PM       No Comments

ಬೆಂಗಳೂರು: ಮಾಜಿ ಸಂಸದೆ ರಮ್ಯಾ ಮತ್ತೊಮ್ಮೆ ಟ್ವಿಟರ್​ನಲ್ಲಿ ವಿವಾದ ಸೃಷ್ಟಿಸಿದ್ದಾರೆ. ಆರ್​ಎಸ್​ಎಸ್​ ಹಾಗೂ ಮುಸ್ಲಿಂ ಬ್ರದರ್​ಹುಡ್​ ಸಂಘಟನೆಗಳಿಗೆ ಹೋಲಿಕೆ ಮಾಡಿ ಟ್ವೀಟ್​ ಮಾಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಎರಡೂ ಸಂಘಟನೆಗಳು ದೇಶ ಹಾಳು ಮಾಡಲು ಹುಟ್ಟಿಕೊಂಡಿವೆ ಎಂದು ಹೇಳಿದ್ದಲ್ಲದೆ, ಕಾಕತಾಳಿಯವೋ? ಅಥವಾ ಏನಾದರೂ ತಂತ್ರವಿದೆಯೋ ಎಂಬರ್ಥದಲ್ಲಿ ತಲೆಬರಹ ಕೊಟ್ಟು, ಕೆಳಗೆ ಆರ್​ಎಸ್​ಎಸ್​, ಮುಸ್ಲಿಂ ಬ್ರದರ್​ಹುಡ್​ ಸಂಘಟನೆಗಳನ್ನು ವ್ಯಾಖ್ಯಾನಿಸಿದ್ದಾರೆ.

1. ಆರ್​ಎಸ್​ಎಸ್​ ಹಾಗೂ ಮುಸ್ಲಿಂ ಬ್ರದರ್​ಹುಡ್​ ಸಂಘಟನೆಗಳೆರಡೂ 1920ರಲ್ಲಿ ಸ್ಥಾಪನೆಗೊಂಡಿವೆ.
2. ಇವೆರಡರ ಮೂಲ ಉದ್ದೇಶ ದೇಶದಲ್ಲಿರುವ ಜಾತ್ಯತೀತ ವ್ಯವಸ್ಥೆಯನ್ನು ಬದಲಿಸುವುದು.
3. 2011ರಲ್ಲಿ ಮುಸ್ಲಿಂ ಬ್ರದರ್​ಹುಡ್​ಗೆ ಅರಬ್​ ಚಳವಳಿ ಬಲ ತುಂಬಿತು. ನಂತರ ಮೊರ್ಸಿ ಆಗಮನದಿಂದ ಸಂಘಟನೆ ಶಕ್ತಿಯುತವಾಯಿತು. ಹಾಗೇ ಅದೇ ವರ್ಷ ಆರ್​ಎಸ್​ಎಸ್​ಗೆ ಅಣ್ಣಾ ಹಜಾರೆಯವರ ಸತ್ಯಾಗ್ರಹ ಪೂರಕವಾಯಿತು. ಮತ್ತು ಮೋದಿಯವರನ್ನು ಕರೆದುಕೊಂಡು ಬಂದು ಸಂಘಟನೆಯ ಶಕ್ತಿ ಪ್ರದರ್ಶನ ಮಾಡಲಾಯಿತು.
4. ದೇಶದ ಮೇಲೆ ಹಿಡಿತ ಸಾಧಿಸುವುದೇ ಇವೆರಡೂ ಸಂಘಟನೆಗಳ ಗುರಿ.
5. ಅನ್ವರ್​ ಸಾಧತ್ ಹತ್ಯೆ ಬಳಿಕ ಮುಸ್ಲಿಂ ಬ್ರದರ್​ಹುಡ್​ ಹಾಗೂ ಮಹಾತ್ಮ ಗಾಂಧೀಜಿ ಸಾವಿನ ಬಳಿಕ ಆರ್​ಎಸ್​ಎಸ್​ ಒಂದು ಬಾರಿ ರದ್ದುಗೊಂಡಿದ್ದವು.

ಎರಡೂ ಸಂಘಟನೆಗಳೂ ಒಂದೇ ಎಂಬರ್ಥದಲ್ಲಿ ರಮ್ಯಾ ಅವರು ಟ್ವೀಟ್​ ಮಾಡಿದ ಈ ಪೋಸ್ಟ್​ ಈಗ ವಿವಾದಕ್ಕೆ ನಾಂದಿ ಹಾಡಿದೆ.

Leave a Reply

Your email address will not be published. Required fields are marked *

Back To Top