
ಗಂಗಾವತಿ: ಕುರುಬರ ಎಸ್ಟಿ ಮೀಸಲು ಪ್ರಸ್ತಾವನೆ ಮುನ್ನೆಲೆಗೆ ಬರಬೇಕಿದ್ದು, ಪೂರಕ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಪುನರ್ ಪ್ರಸ್ತಾವನೆ ರಾಜ್ಯ ಸರ್ಕಾರ ಸಲ್ಲಿಸಬೇಕಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಶ್ರೀ ಕನಕದಾಸ ತಾಲೂಕು ಕುರುಬರ ಸಂಘದಿಂದ ಕನಕ ಭವನ ನಿರ್ಮಾಣ ಮತ್ತು ಶಿಕ್ಷಣ ಸಂಸ್ಥೆ ಅಸ್ತಿತ್ವ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಾಹಿತಿ ಕೊರತೆಯಿಂದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ಸು ಕಳಿಸಿದ್ದು, ಪುನರ್ ಪರಿಶೀಲನೆಗೆ ಕುರುಬ ಸಮಾಜದ ಜನಪ್ರತಿನಿಧಗಿಳು ಸಿಎಂ ಒತ್ತಡ ಹಾಕಬೇಕಿದೆ. ಎಸ್ಟಿ ಮೀಸಲು ವಿಚಾರದಲ್ಲಿ ಯಾವುದೇ ಪಕ್ಷ ಸಹಕರಿಸುತ್ತಿಲ್ಲ. ಮೀಸಲು ದೊರೆತರೆ ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಮಾಜ ಬಲಿಷ್ಠವಾಗಲಿದ್ದು, ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್ ಮಾತನಾಡಿ, ಕನಕ ಭವನ ನಿರ್ಮಾಣ ಮತ್ತು ಶಿಕ್ಷಣ ಸಂಸ್ಥೆ ಅಸ್ತಿತ್ವಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದ್ದು, ಸಮಾಜ ಸಂಘಟನೆ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕಿದೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಮಾತನಾಡಿದರು. ಸಭೆಯಲ್ಲಿ ಕನಕ ಭವನ ನಿರ್ಮಾಣ, ಸಮಾಜ ಸಂಘಟನೆ ಮತ್ತು ಶಿಕ್ಷಣ ಸಂಸ್ಥೆ ಆರಂಭದ ಕುರಿತು ಚರ್ಚಿಸಲಾಯಿತು.
ಬಸಾಪಟ್ಟಣ ನಂಜುಂಡೇಶ್ವರ ಮಠದ ಸಿದ್ದಯ್ಯಗುರುವಿನ್, ಶ್ರೀ ಕನಕದಾಸ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಯಮನಪ್ಪ ವಿಠಲಾಪುರ, ಜಿಪಂ ಮಾಜಿ ಸದಸ್ಯ ವಿರೇಶ ಸಾಲೋಣಿ, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಮಾಜಿ ಸದಸ್ಯ ಕೀರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ಮುಖಂಡರಾದ ಎಮ್ಮಿ ಕೀರಪ್ಪ, ಕೆ.ನಾಗೇಶಪ್ಪ, ಮೋರಿ ದುರುಗಪ್ಪ, ನೀಲಕಂಠಪ್ಪ, ದೇವಪ್ಪ ಭಾವಿಕಟ್ಟಿ, ಡ್ಯಾಗಿ ರುದ್ರೇಶ, ಸಿದ್ದಲಿಂಗಪ್ಪಗೌಡ,ಬಿ.ಶರಣಪ್ಪ, ಕೆ.ತಿರುಕಪ್ಪ ಇತರರಿದ್ದರು.