More

    ಮಾಜಿ ಶಾಸಕ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಣೆ

    ಹೊನ್ನಾಳಿ: ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋಲುಂಡ ಬೆನ್ನಲ್ಲೇ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. ಇವರ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಎಂಪಿಆರ್ ನಿವಾಸದಲ್ಲಿ ಬಳಿ ಜಮಾಯಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆಯಿತು.

    ಶನಿವಾರ ಮತ ಎಣಿಕೆ ಮುಗಿದ ನಂತರ ಸೋಲನ್ನು ಒಪ್ಪಿ ಈ ಸೋಲಿಗೆ ಯಾರನ್ನು ಹೊಣೆ ಮಾಡದೆ ನಾನೇ ಹೊಣೆ ಹೊರುತ್ತೇನೆ ಹಾಗೂ ಇನ್ನು ಮುಂದೆ ನಾನು ಚುನಾವಣೆ ಸ್ಪರ್ಧೆಯಿಂದ ದೂರ ಉಳಿಯುತ್ತೇನೆ ಎಂದು ಘೋಷಿಸಿದರು.

    ಮಾಜಿ ಶಾಸಕ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಣೆ

    ವಿಷಯ ತಿಳಿದ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಎಂಪಿಆರ್ ಅಭಿಮಾನಿಗಳು ನಿವಾಸಕ್ಕೆ ಆಗಮಿಸಿ ನಿಮ್ಮೊಂದಿಗೆ ನಾವಿದ್ದೇವೆ. ತಮ್ಮ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನಾನು ರಾಜಕೀಯಕ್ಕೆ ಬಂದಾಗಿನಿಂದ ಇಂದಿನವರೆಗೂ ಜನರ ಮಧ್ಯೆ ಇದ್ದು ಸೇವೆ ಮಾಡಿದ್ದೇನೆ ಎಂದರು.

    ನಾನು ಮಾಡಿದ ತಪ್ಪಾದರೂ ಏನು?

    ಕಳೆದ ಮೂರು ಅವಧಿಯಲ್ಲಿ ನೂರಾರು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ, ಕರೊನಾ ಹಾಗೂ ಇನ್ನಿತರ ಸಂಕಷ್ಟ ಸಮಯದಲ್ಲೂ ನಿಮ್ಮ ಸೇವೆ ಮಾಡಿದ್ದೇನೆ. ಆದರೂ ನನ್ನನ್ನು ಸೋಲಿಸಿದ್ದೀರಿ. ಆದರೆ, ನಾನು ಮಾಡಿದ ತಪ್ಪಾದರೂ ಏನು? ಎಂದು ಪ್ರಶ್ನಿಸಿದರು.

    ಇದಕ್ಕೆ ಒಪ್ಪದ ಕಾರ್ಯಕರ್ತರು, ಇದೊಂದು ಚುನಾವಣೆ ಸೋಲಾಗಿರಬಹುದು. ಮುಂದಿನ ಚುನಾವಣೆಯಲ್ಲಿ ಇದಕ್ಕೆ ಎರಡು ಪಟ್ಟು ಲೀಡ್‌ನಲ್ಲಿ ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ, ದಯಮಾಡಿ ತಮ್ಮ ನಿರ್ಧಾರ ಬದಲಾಯಿಸಿ ಎಂದು ಮನವಿ ಮಾಡಿ, ಒತ್ತಾಯಿಸಿದರು.

    ಒಂದು ವಾರ ಸಮಯ ನೀಡಿ

    ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ನನಗೆ ಒಂದು ವಾರ ಸಮಯ ನೀಡಿ. ನಂತರ ನನ್ನ ನಿರ್ಧಾರ ತಿಳಿಸುತ್ತೇನೆ ಎಂದಾಗ ಕಾರ್ಯಕರ್ತರು ಒಪ್ಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts