ಎಚ್​.ಡಿ. ದೇವೇಗೌಡರ ಮನದ ಮಾತು ನಿಮ್ಮ ದಿಗ್ವಿಜಯ ನ್ಯೂಸ್​ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮರು ಪ್ರಸಾರ

ಬೆಂಗಳೂರು: ರಾಷ್ಟ್ರ ಹಾಗೂ ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿ, ಇಳಿ ವಯಸ್ಸಿನಲ್ಲೂ ಯುವ ನಾಯಕರಿಗೆ ಉತ್ಸಾಹದ ಚಿಲುಮೆಯಾಗಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​. ಡಿ. ದೇವೇಗೌಡ ಅವರು ತಮ್ಮ ಮನದಾಳವನ್ನು ನಿಮ್ಮ ದಿಗ್ವಿಜಯ ನ್ಯೂಸ್​ನೊಂದಿಗೆ ಹಂಚಿಕೊಂಡಿದ್ದಾರೆ.

ಹಲವು ಕೌತುಕ ವಿಷಯಗಳನ್ನು ಹಂಚಿಕೊಂಡಿರುವ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಯಾವ ರೀತಿಯ ಪ್ರಯತ್ನ ಕೈಗೊಂಡಿದ್ದಾರೆ?​ ಈಗಿನ ಕಾಂಗ್ರೆಸ್​ ಸರ್ಕಾರ ತನ್ನಅಧಿಕಾರದ ಅವಧಿಯಲ್ಲಿ ಜನತೆಗೆ ನ್ಯಾಯ ಒದಗಿಸಿದೆಯಾ ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಖಡಕ್​  ಉತ್ತರ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ತಮ್ಮ ಆರೋಗ್ಯದ ಗುಟ್ಟಿನ ಬಗ್ಗೆ ಗೌಡರು ಹೇಳಿದ್ದೇನು? ಲಕ್ಷ್ಮೀ ದೇವಸ್ಥಾನದ ಮುಂದೆ ಗೌಡರು ಕಣ್ಣೀರು ಹಾಕಿದ್ದೇಕೆ? ತಮ್ಮ ನೆಚ್ಚಿನ ಮಡದಿಯ ಕುರಿತು ಅವರು ಹೇಳಿದ್ದೇನು? ಎಂಬುದನ್ನು ತಿಳಿಯಬೇಕಾದರೆ ಇಂದು ಬೆಳಗ್ಗೆ(ಭಾನುವಾರ) 11 ಗಂಟೆಗೆ ಮರು ಪ್ರಸಾರವಾಗುವ ದೇವೇಗೌಡರ ವಿಶೇಷ ಸಂದರ್ಶನವನ್ನು ನಿಮ್ಮ ದಿಗ್ವಿಜಯ ನ್ಯೂಸ್​ನಲ್ಲಿ ತಪ್ಪದೇ ವೀಕ್ಷಿಸಿ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *