ಹಾವೇರಿ: ನಾನು ರಾಜಕೀಯ ಸನ್ಯಾಸಿ ಅಲ್ಲ. ಪಕ್ಷ ನಿರ್ಧರಿಸಿದರೆ ಹಾಗೂ ನೀನು ನಿಲ್ಲು ಎಂದರೆ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಅಭ್ಯರ್ಥಿ ಯಾರಾಗಬೇಕು ಎಂದು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗಾಗಲೇ ಕ್ಷೇತ್ರದಲ್ಲಿ ಸರ್ವೇ ಕೂಡ ನಡೆಸಿದೆ. ಸರ್ವೇದಲ್ಲಿ ಯಾರ ಹೆಸರು ಬರುತ್ತದೆ ಅವರಿಗೆ ಟಿಕೆಟ್ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ಅವರು ಹೇಳಿದ ಬಳಿಕವೇ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ. ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ನಮ್ಮೆಲ್ಲರದ್ದು ಆಗಿದೆ. ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಎಲ್ಲರೂ ಒಟ್ಟಾಗಿ ಗೆಲ್ಲಿಸುವ ಕೆಲಸ ಮಾಡುತ್ತೇವೆ. ಆದರೆ, ಪಕ್ಷ ಏನಾದರೂ ನೀನು ನಿಲ್ಲಪ್ಪ ಎಂದು ಹೇಳಿದರೆ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದರು.
ಜಗದೀಶ ಶೆಟ್ಟರ್ ಪಕ್ಷದ ಮರಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಜಗದೀಶ ಶೆಟ್ಟರ್ ಮರಳಿ ಮನೆಗೆ ಬಂದಿದ್ದಾರೆ. ರಾಹುಕಾಲ, ಗುಳಿಕಾಲ ಅಂತಾ ಇರ್ತಾವಲ್ಲ ಕಾಲ ಕೆಟ್ಟಿದ್ದರಿಂದ ಅದೇನೇನೋ ಆಗಿ ಈಗ ಸರಿಯಾಗಿದೆ. ಅವರು ಹಿರಿಯರು ಮರಳಿ ಪಕ್ಷಕ್ಕೆ ಬಂದಿದ್ದರಿಂದ ಒಂದು ದೊಡ್ಡ ಶಕ್ತಿ ಬಂದತಾಗಿದೆ ಎಂದರು.
ಪಕ್ಷದ ಹೈಕಮಾಂಡ್ ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ; ಬಿ.ಸಿ. ಪಾಟೀಲ

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango
mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…
ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ.. Akshaya Tritiya
Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಅಂಗಡಿಗಳು ವ್ಯಾಪಾರದಿಂದ…
ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice
Sugarcane Juice: ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…