ನಾನು ಸಾವಿನ ಮನೆಗೆ ಹೋಗುವುದಿಲ್ಲ: ಅಂಬರೀಶ್​

ಮಂಡ್ಯ: ನಾನು ಸಾಮಾನ್ಯವಾಗಿ ಸಾವಿನ ಮನೆಗೆ ಹೋಗುವುದಿಲ್ಲ. ಅಲ್ಲಿಗೆ ಹೋದರೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಾರೆ. ಹಾಗಾಗಿ ನಾನು ಸಾವಿನ ಮನೆಯಿಂದ ದೂರವಿರುತ್ತೇನೆ ಎಂದು ಮಾಜಿ ಸಚಿವ ಅಂಬರೀಶ್​ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮೃತಪಟ್ಟಿದ್ದ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವರ ಮನೆಗೆ ಮಾಜಿ ಸಚಿವ ಅಂಬರೀಶ್​ ಗುರುವಾರ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬೋರೇಗೌಡ ಅವರು ಮೃತಪಟ್ಟ ದಿನ ನನಗೆ ಬರಲು ಸಾಧ್ಯವಾಗಲಿಲ್ಲ ಎಂದು ವೈಯಕ್ತಿಕ ಕಾರಣ ನೀಡಿದರು.

ಲಾರಿಯಲ್ಲಿ ಮೆರವಣಿಗೆ ಮಾಡಿದ್ದರು

ಹಿಂದೊಮ್ಮೆ ಇದೇ ರೀತಿ ಆಗಿತ್ತು. ತಿಥಿ ಕಾರ್ಯಕ್ಕೆಂದು ಹೋಗಿದ್ದ ನನ್ನನ್ನು ಲಾರಿಯಲ್ಲಿ ಬಂದು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದರು. ಇದು ಎಂತಹ ಅವಮಾನ ಅಲ್ಲವೇ? ಈ ಕಾರಣದಿಂಲೇ ನಾನು ಅಂದು ಬರಲಿಲ್ಲ ಎಂದು ಅಂಬರೀಷ್​ ಅವರು ಬೋರೇಗೌಡ ಅವರ ಕುಟುಂಬಸ್ಥರಿಗೆ ತಿಳಿಸಿದರು.

ಬೋರೇಗೌಡ ಅವರು ಮೃತಪಟ್ಟ ದಿನ ಬರಲಿಲ್ಲ ಎಂದು ಅಂಬರೀಷ್​ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.