ಭಜ್ಜಿ ಮಗಳನ್ನು ಮಗ ಅಂದ್ಕೊಂಡ್ರು ಗಂಗೂಲಿ ಕೊನೆಗೆ ಏನಂದ್ರು ಗೊತ್ತಾ..?

ನವದೆಹಲಿ: ಜೀವನದಲ್ಲಿ ಎಲ್ಲರೂ ಕನ್ಫ್ಯೂಸ್​ ಆಗುವುದು ಸಹಜ. ಅದಕ್ಕೆ ತಿಳಿದವರು ತಿಳಿಯದವರೂ ಎಂಬ ಅಳತೆಗೋಲು ಇಲ್ಲ. ಸರಿ ಈಗ್ಯಾಕಪ್ಪಾ ಆ ವಿಷಯ ಅಂತಿರಾ… ವಿಷಯ ಏನೆಂದರೆ ನಮ್ಮ ಬಂಗಾಳದ ಹುಲಿ ಇದ್ದಾರಲ್ಲ ಅದೇ ನಮ್ಮ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಅವರು ಕೂಡ ಇದೇ ರೀತಿ ಕನ್ಫ್ಯೂಸ್ ಆಗಿದ್ದಾರೆ.​

ಗಂಗೂಲಿಯವರು ಯಾಕ್​ ಕನ್ಫ್ಯೂಸ್​ ಆದ್ರು ಅಂತ ಅಂದ್ಕೊಂಡ್ರ ಯಾಕೆಂದರೆ ನಮ್ಮ ಟೀಂ ಇಂಡಿಯಾದ ಗೂಗ್ಲಿ ಸ್ಪೆಷಲಿಸ್ಟ್​ ಹರ್ಭಜನ್​ ಸಿಂಗ್​ ಅವರ ಮಗಳನ್ನು ನೋಡಿ ಗಂಡು ಮಗುವೆಂದು ಭಾವಿಸಿ ಟ್ವಿಟ್ಟರ್​ನಲ್ಲಿ ಕಮೆಂಟ್​ ಮಾಡಿದ್ದಾರೆ.

ಅಂದಹಾಗೆ ಹರ್ಭಜನ್ ಪತ್ನಿ ಗೀತಾ ಬಸ್ರಾ ಹಾಗೂ ಮಗಳು ಹಿನಾಯಾ ಜೊತೆಗೆ ಗೋಲ್ಡನ್ ಟೆಂಪಲ್​ನಲ್ಲಿರುವ ಫೋಟೋವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದರು.

ಟ್ವಿಟ್ಟರ್​ನಲ್ಲಿ ಅಷ್ಟೊಂದು ಸಕ್ರೀಯವಾಗಿಲ್ಲದ ಸೌರವ್​ ಗಂಗೂಲಿ ಹರ್ಭಜನ್​ ಪೋಸ್ಟ್ ಮಾಡಿರುವ ಫೋಟೋವನ್ನು ನೋಡಿ ಏನೋ ಚೆನ್ನಾಗಿರುವ ಕಮೆಂಟ್ ಮಾಡಬೇಕೆನಿಸಿತೋ ಏನೋ. ಹಾಗಾಗಿ ಕಮೆಂಟ್ ಕೂಡಾ ಮಾಡಿದ್ದಾರೆ.

‘ಮಗ ಬಹಳ ಸುಂದರವಾಗಿದ್ದಾನೆ ಭಜ್ಜೀ, ಹೆಚ್ಚು ಪ್ರೀತಿ ಕೊಡು’ ಎಂದು ಟ್ವಿಟ್ಟ್ ಮಾಡಿದ್ದಾರೆ. ಆ ನಂತರ ಹರ್ಭಜನ್​ರದ್ದು ಮಗ ಅಲ್ಲ ಮಗಳು ಎಂದು ತಿಳಿದ ನಂತರ ಕ್ಷಮೆಯಾಚಿಸಿದ ಗಂಗೂಲಿ, ‘ಕ್ಷಮಿಸಿ.. ಮಗಳು ಬಹಳ ಸುಂದರವಾಗಿದ್ದಾಳೆ’ ಎಂದು ಹೇಳಿದ್ದಾರೆ. ಜೊತೆಗೆ ನನಗೆ ವಯಸ್ಸಾಗುತ್ತಿದೆ ಎನ್ನುವುದನ್ನು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *