ಚಂಬಲ್​ ಚಿತ್ರದ ವಿರುದ್ಧ ಮಾಜಿ ಐಎಎಸ್​ ಅಧಿಕಾರಿ ಡಿ.ಕೆ ರವಿ ತಾಯಿ ಗೌರಮ್ಮ ದೂರು

ಬೆಂಗಳೂರು: ನೀನಾಸಂ ಸತೀಶ್​ ಅವರ ನಟನೆಯ ‘ಚಂಬಲ್​’ ಚಿತ್ರದ ವಿರುದ್ಧ ಮಾಜಿ ಐಎಎಸ್​ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ ರವಿ ಅವರ ತಾಯಿ ಗೌರಮ್ಮ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಚಂಬಲ್​ ಚಿತ್ರ ಡಿ.ಕೆ ರವಿ ಅವರ ಕತೆ ಆಧಾರಿತ ಎಂದು ಹೇಳಲಾಗುತ್ತಿದೆ. ಆದರೆ, ಆ ಸಿನಿಮಾಕ್ಕೆ ಚಿತ್ರತಂಡ ನಮ್ಮ ಕುಟುಂಬದಿಂದ ಅನುಮತಿ ಪಡೆದಿಲ್ಲ. ಹಾಗೇನಾದರೂ ಡಿ.ಕೆ ರವಿ ಕತೆಯಲ್ಲದಿದ್ದರೆ ಚಿತ್ರ ಬಿಡಗಡೆಗೂ ಮೊದಲು ಅದನ್ನು ನಮಗೆ ತೋರಿಸಬೇಕು ಎಂದು ದೂರಿನಲ್ಲಿ ಗೌರಮ್ಮ ಅವರು ಕೋರಿದ್ದಾರೆ.

ಒಂದು ವೇಳೆ ಡಿ.ಕೆ ರವಿ ಕತೆಯೇನಾದರೂ ಇದ್ದಲ್ಲಿ ಚಿತ್ರತಂಡ ರಾಯಧನ ಕಟ್ಟಿಕೊಡಬೇಕು. ಇಲ್ಲವಾದಲ್ಲಿ ಚಿತ್ರ ಬಿಡುಗಡೆಗೆ ತಡೆ ತರುತ್ತೇವೆ ಎಂದು ಡಿ.ಕೆ ರವಿ ಕುಟುಂಬ ಹೇಳಿದೆ.