ಮಾಜಿ ಸಿಎಂ ಸಿದ್ದರಾಮಯ್ಯಗೆ ಇತ್ತೀಚೆಗೆ ಮತಿಭ್ರಮಣೆ ಆಗುತ್ತಿದೆ: ಶಾಸಕ ಶ್ರೀರಾಮುಲು ಟೀಕೆ

ಹುಬ್ಬಳ್ಳಿ: ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆ ಆಗುತ್ತಿದೆ. ಒಂದು ಸಲ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಇನ್ನೊಮ್ಮೆ ಎಚ್​.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಸಿಎಂ ಎನ್ನುತ್ತಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಟೀಕಿಸಿದ್ದಾರೆ.

ದೇವನೂರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲ ಜಾತಿಯ ನಾಯಕರು ಸಿಎಂ ಆಗಿದ್ದಾರೆ. ಈಗಿನ ಸರದಿ ದಲಿತರು, ವಾಲ್ಮೀಕಿ ಸಮಾಜದವರದ್ದು. ಪ್ರಸ್ತುತ ದಲಿತ ಮುಖಂಡರನ್ನು ಸಿಎಂ ಮಾಡಲು ಅವಕಾಶವಿದೆ. ಖರ್ಗೆ ಇಲ್ಲವೇ ಪರಮೇಶ್ವರ ಅವರನ್ನು ಸಿಎಂ ಮಾಡಬೇಕು. ಖರ್ಗೆ ಸಿಎಂ ಆಗ್ತಾರೆ ಅಂದಾರೆ ನಮ್ಮ ಅಭ್ಯಂತರವಿಲ್ಲ ಎಂದರು.

ಪರಮೇಶ್ವರ್​ ಅವರು ಸಿಎಂ ಆಗಿಲ್ಲ ಎಂದು ಕಣ್ಣೀರು ಕೂಡ ಹಾಕಿದ್ದಾರೆ. ಈಗ ಸಿದ್ದರಾಮಯ್ಯ ಕೈಯಲ್ಲಿ ಚೆಂಡು ಇದೆ. ಕೇವಲ ಮಾತನಾಡುವುದರಿಂದ ದಲಿತರು ಸಿಎಂ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಜಮೀರ್​ ಅಹಮದ್​ ಅವರು ಶೋಭಾ ಕರಂದ್ಲಾಜೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಮೀರ್​ ಅಹಮದ್​ ಬಹಳ ದೊಡ್ಡ ಶ್ರೀಮಂತರು. ಪ್ರಧಾನಿ ಬಗ್ಗೆ ಕೂಡ ಮಾತನಾಡುತ್ತಾರೆ. ಜಮೀರ್​ ಅಹಮದ್​ ಹಣದಿಂದ ರಾಜಕಾರಣ ಮಾಡುತ್ತಿದ್ದಾರೆ. ಶಕ್ತಿವಂತರಾಗಿ ಬೆಳೆದಾಗ ತಲೆ ಬಗ್ಗಿಸಿ ರಾಜಕಾರಣ ಮಾಡಬೇಕು. ರಾಜಕಾರಣದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *