ಪ್ರಧಾನಿ ಮೋದಿ ಲಂಚಮುಕ್ತ ಆಡಳಿತ ನೀಡಿದ್ದಾರೆ, ಅವರಿಗೇ ಅಧಿಕಾರ ನೀಡಬೇಕು: ಎಸ್​.ಎಂ.ಕೃಷ್ಣ

ಮಂಡ್ಯ: ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಂಚಮುಕ್ತ ಆಡಳಿತ ನೀಡಿದ್ದಾರೆ. ಹೀಗಾಗಿ ಮುಂದಿನ ಐದು ವರ್ಷಕ್ಕೂ ಮೋದಿ ಅವರಿಗೇ ಆಡಳಿತ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಕ್ಕರೆ ನಾಡಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ಒಬ್ಬ ಸಮರ್ಥ ನಾಯಕನ ಹುಡುಕಾಟದಲ್ಲಿತ್ತು. ಆ ಸ್ಥಾನವನ್ನು ಮೋದಿ ಅವರು ತುಂಬಿದ್ದಾರೆ. ಕಳೆದ 5 ವರ್ಷದಲ್ಲಿ ಮೋದಿ ಅವರು ಉತ್ತಮ ಆಡಳಿತ ನೀಡಿದ್ದಾರೆ. ಶಕ್ತಿಶಾಲಿ ಆಡಳಿತದ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಶಂಸಿಸಿದರು.

ಮೂರನೇ ಶಕ್ತಿಯಾಗಿ ಪ್ರಿಯಾಂಕಾ ಗಾಂಧಿ ಅವರು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಉತ್ತರಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತನ್ನದೇ ಆದ ನೆಲೆ ಇರುವುದರಿಂದ ಮೈತ್ರಿಕೂಟಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಲಿವೆ ಎಂದರು.

ದೇಶದ ಎಲ್ಲ ಕಡೆ ನರೇಂದ್ರ ಮೋದಿ ಅವರು ವರ್ಚಸ್ಸು ಹಾಗೇ ಇದೆ. ಮೋದಿ ಆಡಳಿತ ಕಸಿಯಲು ದೇಶದಲ್ಲಿ ನಾಯಕತ್ವದ ಕೊರತೆಯಿರುವುದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತೊಂದರೆ ಆಗುವುದಿಲ್ಲ. ರಾಜ್ಯದಲ್ಲಿಯೂ ಬಿಜೆಪಿಗೆ ಉತ್ತಮ ಭವಿಷ್ಯವಿದೆ. ಕಳೆದ ಚುನಾವಣೆಯಲ್ಲಿ 104 ಸ್ಥಾನ ಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)