ಬಿಜೆಪಿಯ ಮುಕುಟಕ್ಕೆ ಮತ್ತೊಂದು ರತ್ನ: ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಎಸ್​ವೈ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಕಲಬುರಗಿ: ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬುಧವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿ.ಎಸ್​. ಯಡಿಯೂರಪ್ಪ ಉಪಸ್ಥಿತಿಯಲ್ಲಿ ರತ್ನಪ್ರಭಾ ಕೇಸರಿ ಪಾಳೆಯ ಸೇರಿಕೊಂಡರು.

ಇದಕ್ಕೂ ಮುನ್ನ ಅವರು ಕಲಬುರಗಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಉಮೇಶ್​ ಜಾಧವ್​ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡರು.

ರಾಷ್ಟ್ರಸೇವೆ ಮಾಡುವ ಹೆಬ್ಬಯಕೆ ಹೊಂದಿದ್ದೆ. ಈ ಹೆಬ್ಬಯಕೆಯನ್ನು ಈಡೇರಿಸಿಕೊಳ್ಳಲು ಮತ್ತು ಜನಕಲ್ಯಾಣ ಮಾಡಲು ಬಿಜೆಪಿ ಹೆಚ್ಚು ಸೂಕ್ತವೆನಿಸಿತು. ಆದ್ದರಿಂದ, ನಾನು ಈ ಪಕ್ಷವನ್ನು ಸೇರಿಕೊಂಡೆ ಎಂದು ಹೇಳಿದರು. (ಏಜೆನ್ಸೀಸ್​)

One Reply to “ಬಿಜೆಪಿಯ ಮುಕುಟಕ್ಕೆ ಮತ್ತೊಂದು ರತ್ನ: ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಿಎಸ್​ವೈ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ”

Comments are closed.