ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದು ವೇದಿಕೆ ಮೇಲೆ ನಿದ್ದೆಗೆ ಜಾರಿದ ಮಾಜಿ ಸಿಎಂ ಸಿದ್ದರಾಮಯ್ಯ !

ಗದಗ: ಇಲ್ಲಿನ ಗಜೇಂದ್ರಗಡ ತಾಲೂಕಿನ ನರೇಗಲ್​ನಲ್ಲಿ ಇಂದು ಕಾಂಗ್ರೆಸ್​ ಸಮಾವೇಶನ ನಡೆಯಿತು. ಹಾವೇರಿ ಲೋಕಸಭಾ ಅಭ್ಯರ್ಥಿ ಡಿ.ಆರ್​.ಪಾಟೀಲ್​ ಪರ ಮತಯಾಚನೆಗಾಗಿ ನಡೆದ ಈ ಸಮಾವೇಶದಲ್ಲಿ ಮಹಿಳೆಯರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಈ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದರು. ಹಾಗೇ ಸ್ಥಳೀಯ ಮುಖಂಡರಾದ ಎಚ್​.ಕೆ.ಪಾಟೀಲ್​, ಜಿ.ಎಸ್​.ಪಾಟೀಲ್​, ಬಿ.ಆರ್​.ಯಾವಗಲ್​, ಶ್ರೀಶೈಲಪ್ಪ ಬಿದರೂರು ಸೇರಿ ಹಲವರು ಸಾಥ್​ ನೀಡಿದ್ದರು. ಆದರೆ ಸಿದ್ದರಾಮಯ್ಯನವರು ಮಾತ್ರ ವೇದಿಕೆಯಲ್ಲಿ ನಿದ್ದೆಹೋಗಿದ್ದು ಇವರೆಲ್ಲರಿಗೆ ಮುಜುಗರ ತರಿಸಿತು.

ಗಡದ್ದಾಗಿ ನಿದ್ದೆ ಮಾಡುತ್ತಿದ್ದ ಸಿದ್ದರಾಮಯ್ಯನವರನ್ನು ನೋಡಿದ ಕಾಂಗ್ರೆಸ್​ ಮಾಜಿ ಶಾಸಕ ಜಿ.ಎಸ್​.ಪಾಟಿಲ್​ ಅವರನ್ನು ಎಬ್ಬಿಸುವಂತೆ ನರಗುಂದದ ಮಾಜಿ ಶಾಸಕರತ್ತ ಸನ್ನೆ ಮಾಡಿದರು. ಬಳಿಕ ಸಿದ್ದರಾಮಯ್ಯನವರನ್ನು ಎಚ್ಚರಗೊಳಿಸಲಾಯಿತು.

One Reply to “ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದು ವೇದಿಕೆ ಮೇಲೆ ನಿದ್ದೆಗೆ ಜಾರಿದ ಮಾಜಿ ಸಿಎಂ ಸಿದ್ದರಾಮಯ್ಯ !”

Leave a Reply

Your email address will not be published. Required fields are marked *