ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಸಿದ್ದು ‘ಗುದ್ದು’

ಮೈಸೂರು: ಇತ್ತೀಚೆಗೆ ತಮ್ಮನ್ನು ಪ್ರಶ್ನಿಸಿದ ಪಕ್ಷದ ಕಾರ್ಯಕರ್ತೆಯ ಮೇಲೆ ಸಿಟ್ಟಿಗೆದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮತ್ತೆ ತಾಳ್ಮೆ ಕಳೆದುಕೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯೊಬ್ಬನನ್ನು ದೂರ ತಳ್ಳಿ ಏಟು ಕೊಟ್ಟಿದ್ದಾರೆ.

ಹೌದು, ಶುಕ್ರವಾರ ರಾತ್ರಿ ಮೈಸೂರಿನ ಸಿದ್ಧಾರ್ಥನಗರದಲ್ಲಿ ಕನಕ ಭವನದ ಉದ್ಘಾಟನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಸಿದ್ದರಾಮಯ್ಯ ಅವರು ಬಜೆಟ್​ ಅಧಿವೇಶನದ ಶುಕ್ರವಾರದ ಕಲಾಪ ಮುಗಿಸಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ನೇರವಾಗಿ ಕನಕ ಭವನದ ಉದ್ಘಾಟನೆಗೆ ಆಗಮಿಸಿದ್ದರು. ಅವರು ಕಾರು ಇಳಿದು ಹೋಗುವಾಗ ಅಭಿಮಾನಿಯೊಬ್ಬರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಸಿದ್ದರಾಮಯ್ಯ ಅವರಿಗೆ ಅಡ್ಡ ನಿಂತ ಅಭಿಮಾನಿ ಸೆಲ್ಫಿ ಕ್ಲಿಕ್ಕಿಸಲು ಮುಂದಾದರು. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಿದ್ದರಾಮಯ್ಯ ಆ ವ್ಯಕ್ತಿಯನ್ನು ಹಿಂದೆ ಎಳೆದು ನೂಕಿದರು. ಜತೆಗೆ ಅವರಿಗೆ ಒಂದು ಏಟನ್ನೂ ಕೊಟ್ಟರು.

ಜನವರಿ 28 ರಂದು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಜನರ ಕುಂದುಕೊರತೆ ಆಲಿಸಲು ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತೆಯೊಬ್ಬರು ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರು. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಆಕೆಯ ಕೈಯಿಂದ ಮೈಕ್​ ಕಿತ್ತುಕೊಂಡಿದ್ದರು. ಸಿದ್ದರಾಮಯ್ಯ ಅವರು ಅನುಚಿತವಾಗಿ ವರ್ತಿಸಿದ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕರ್ನಾಟಕ ಪೊಲೀಸ್​ ಇಲಾಖೆಗೆ ಪತ್ರ ಬರೆದಿತ್ತು.

2 Replies to “ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಸಿದ್ದು ‘ಗುದ್ದು’”

  1. Sullu Ramaiah. He is now mad. He never thought he will one day required to support Kumaraswamy as a chief minister . The reasons for which he left JDS long back. If Rape is inevitable enjoy it siddh. Be cool.

  2. ಸೆಲ್ಫೀ ತೆಗೆಯುವವರ ಕಾಟ ಹೋದಲ್ಲೆಲ್ಲ ಇದ್ದರೆ ಪಾಪ ಎಷ್ಟು ಅಂತ ಸಹಿಸಿಕೊಳ್ತಾರೆ. ? ಹೇಗಿದ್ದರೂ ಅಭಿಮಾನಿ ತಾನೆ? ತಮ್ಮ ಗುರು ಒಂದೇಟು ಹೊಡೆದರೆ ಸ್ವೀಕರಿಸೋದು. ಏನ್ ಮಹಾ?

Comments are closed.