10 ಜನ್ಮ ಎತ್ತಿ ಬಂದರೂ ನನ್ನ, ದೇವೇಗೌಡರನ್ನು ಏನೂ ಮಾಡೋಕಾಗಲ್ಲ, ಸಿಬಿಐ ಅಲ್ಲ, ಟ್ರಂಪ್‌ ನೇತೃತ್ವದಲ್ಲಾದರೂ ತನಿಖೆ ನಡೆಸಲಿ!

ಮಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿರುವ ಜನಪ್ರತಿನಿಧಿಗಳ ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಒಪ್ಪಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ 10 ಜನ್ಮ ಹೆತ್ತು ಬಂದರೂ ನನ್ನನ್ನು ಏನೂ ಮಾಡೋಕಾಗಲ್ಲ. ನನ್ನ ಮತ್ತು ದೇವೇಗೌಡ ಕುಟುಂಬಕ್ಕೆ ಏನೂ ಮಾಡಲು ಆಗುವುದಿಲ್ಲ. ಸಿಬಿಐ ಅಲ್ಲ, ಟ್ರಂಪ್ ನೇತೃತ್ವದಲ್ಲಿ ಬೇಕಾದರೂ ತನಿಖೆ ಮಾಡಲಿ. ನಾನು ಎಲ್ಲ ತನಿಖೆಗೆ ಸಿದ್ಧವಾಗಿದ್ದೇನೆ ಎಂದು ತಿಳಿಸಿದರು.

ನನ್ನ ಇಮೇಜ್ ನಾಶ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮನವಿ ಮೇರೆಗೆ ಯಡಿಯೂರಪ್ಪ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯರ ಮನವಿಗೆ ಇಷ್ಟು ಬೆಲೆ ಕೊಟ್ಟಿದ್ದಕ್ಕೆ ಯಡಿಯೂರಪ್ಪರಿಗೆ ಧನ್ಯವಾದಗಳು. ಕೇವಲ ನನ್ನ ಅವಧಿ ಮಾತ್ರವಲ್ಲ, ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಲ್ಲಾದ ಕದ್ದಾಲಿಕೆ ಪ್ರಕರಣವನ್ನು ನೀಡಲಿ. ಸಿಬಿಐ ತನಿಖೆಯನ್ನು ಎದುರಿಸಲು ನಾನು ಸರ್ವ ಸನ್ನದ್ಧನಾಗಿದ್ದೇನೆ ಎಂದು ಹೇಳಿದರು.

ಸಿಬಿಐ ಅಲ್ಲ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ತನಿಖೆ ಬೇಕಾದರೂ ಮಾಡಲಿ. ಜೆಡಿಎಸ್ ಪಕ್ಷ ಎಲ್ಲ ರೀತಿಯ ಸಹಕಾರ ನೀಡಲಿದೆ. ಫೋನ್ ಕದ್ದಾಲಿಕೆ ವಿಚಾರದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳು ನನ್ನನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದೆ. ನನ್ನ ಮತ್ತು ಜನತೆಯ ನಡುವೆ ಅವಿಶ್ವಾಸ ಮೂಡಿಸಲು ಯತ್ನಿಸುತ್ತಿದೆ. ನಾನು ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ಮೀಡಿಯಾಗಳ ಒತ್ತಡಕ್ಕೆ ಬಗ್ಗುವುದಿಲ್ಲ. ಮಾಧ್ಯಮಗಳು ಏನು ಬೇಕಾದರೂ ತೋರಿಸಲಿ. ಮಾಧ್ಯಮಗಳು ಫೋನ್ ಕದ್ದಾಲಿಕೆಯ ಸ್ಟೋರಿ ಮಾಡಿ ಬಿಲ್ಡಪ್ ತಗಳೋ ಪ್ರಯತ್ನದಲ್ಲಿದೆ. ಇದರಲ್ಲಿ ಅವುಗಳು ಯಶಸ್ವಿಯಾಗುವುದಿಲ್ಲ ಎಂದರು. (ದಿಗ್ವಿಜಯ ನ್ಯೂಸ್)

3 Replies to “10 ಜನ್ಮ ಎತ್ತಿ ಬಂದರೂ ನನ್ನ, ದೇವೇಗೌಡರನ್ನು ಏನೂ ಮಾಡೋಕಾಗಲ್ಲ, ಸಿಬಿಐ ಅಲ್ಲ, ಟ್ರಂಪ್‌ ನೇತೃತ್ವದಲ್ಲಾದರೂ ತನಿಖೆ ನಡೆಸಲಿ!”

  1. ಕುಂಬಳಕಾಯಿ ಕಳ್ಳ ಅಂದರೆ ಅದೇನೋ ಮುಟ್ಟಿಕೊಂಡು ನೋಡಿದನಂತೆ ಹಾಗಾಯಿತು ಒಬ್ಬ ಮಾಜಿ ಮುಖ್ಯಮಂತ್ರಿಯ ಪರಿಸ್ಥಿತಿ.

  2. A shameless family and idiot ex cm and pm want power at any cost. Looted karnataka by Pappu indirectly. Siddu ellidiyappa. Siddu mathe buddu

  3. ನಿಮ್ಮ ಈ ಹೇಳಿಕೆ ಇಂದ ನಿಮ್ಮ ಯೋಗ್ಯತೆ ಗೊತ್ತಾಗುತ್ತದೆ

Leave a Reply

Your email address will not be published. Required fields are marked *