Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಕನ್ನಡಿಗ ರಾಹುಲ್​ ಡ್ರಾಪ್​ ಮಾಡಿದ್ದಕ್ಕೆ ಗರಮ್​ ಆದ ಸೌರವ್​ ಗಂಗೂಲಿ

Wednesday, 18.07.2018, 7:08 PM       No Comments

ನವದೆಹಲಿ: ಇಂಗ್ಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಕನ್ನಡಿಗ ಕೆ.ಎಲ್​. ರಾಹುಲ್​ ನನ್ನು ಕೈಬಿಟ್ಟಿದ್ದಕ್ಕೆ ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಕಿಡಿ ಕಾರಿದ್ದಾರೆ.

ಉತ್ತಮ ಫಾರ್ಮ್​ನಲ್ಲಿದ್ದರೂ ಸಹ ಕೆ.ಎಲ್​. ರಾಹುಲ್​ ಅವರನ್ನು ಮೂರನೇ ಪಂದ್ಯದಲ್ಲಿ ಕಣಕ್ಕಿಳಿಸಲಿಲ್ಲ. ಮ್ಯಾಂಚೆಸ್ಟರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ರಾಹುಲ್​ ಅತ್ಯುತ್ತಮ ಶತಕ ಗಳಿಸಿದ್ದರು. ಆದರೆ, ರಾಹುಲ್​ನನ್ನು ಈಗ ಡ್ರಾಪ್​ ಮಾಡಲಾಗಿದೆ. ಭಾರತ ತಂಡದ ಆಡಳಿತ ರಾಹುಲ್​ಗೆ ಆಡಲು ಸೂಕ್ತ ಅವಕಾಶ ನೀಡುತ್ತಿಲ್ಲ. ಈ ವಿಧದಲ್ಲಿ ಪ್ರಯೋಗ ಮಾಡುವ ಮೂಲಕ ಉತ್ತಮ ತಂಡ ಕಟ್ಟಲು ಸಾಧ್ಯವಿಲ್ಲ. ರಾಹುಲ್​ಗೆ ಕನಿಷ್ಠ ಪಕ್ಷ 15 ಪಂದ್ಯಗಳನ್ನಾದರೂ ನಿರಂತರವಾಗಿ ಆಡಲು ಅವಕಾಶ ನೀಡಬೇಕು ಎಂದು ಸೌರವ್​ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಆಡಳಿತ ಮಂಡಳಿ ಅಜಿಂಕ್ಯ ರಹಾನೆ ವಿಚಾರದಲ್ಲೂ ಇದೇ ರೀತಿಯ ಧೋರಣೆ ಅನುಸರಿಸುತ್ತಿದೆ. ರಾಹುಲ್​ ಮತ್ತು ರಹಾನೆ ಅತ್ಯುತ್ತಮ ಬ್ಯಾಟ್ಸಮನ್​ಗಳು. ಈ ಇಬ್ಬರಲ್ಲಿ ಒಬ್ಬ ಆಟಗಾರನನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕು. ಆಗ ಮಾತ್ರ ಅಗ್ರ ಕ್ರಮಾಂಕದ ಆಟಗಾರರ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಅದೇ ರೀತಿ ತಂಡದಲ್ಲಿ ನಾಲ್ಕನೇ ಮತ್ತು ಐದನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರರು ಆಡಬೇಕು. ಆ ನಂತರ ಆರನೇ ಕ್ರಮಾಂಕದಲ್ಲಿ ದಿನೇಶ್​ ಕಾರ್ತಿಕ್​ ಅಥವಾ ಧೋನಿ ಮತ್ತು ಏಳನೇ ಕ್ರಮಾಂದಲ್ಲಿ ಹಾರ್ದಿಕ್​ ಪಾಂಡ್ಯರನ್ನು ಆಡಿಸುವ ಕುರಿತು ಯೋಚಿಸಬೇಕು ಎಂದು ಗಂಗೂಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top