BJP: ಮಧ್ಯಪ್ರದೇಶದಲ್ಲೊಂದು ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಬಿಜೆಪಿ ಶಾಸಕಿಯೊಬ್ಬರ ವೈಯಕ್ತಿಕ ಜೀವನ ಇದೀಗ ನ್ಯಾಯಾಲಯ ತಲುಪಿದೆ ಎಂದು ವರದಿಯಾಗಿದೆ.
ಹೌದು, ದಾಮೋದರ ಜಿಲ್ಲೆಯ ಪಠಾರಿ ಕ್ಷೇತ್ರದ ಮಾಜಿ ಬಿಜೆಪಿ(2003ರಲ್ಲಿ) ಶಾಸಕಿಯಾಗಿರುವ ಸೋನಬಾಯಿ ಅಹಿರ್ವಾರ್(Sonubai Ahirwar), ತನ್ನ ಸ್ವಂತ ಪತಿ ಸೇವಕ್ ರಾಮ್ ಅಹಿರ್ವಾರ್ ಅವರನ್ನು 2009 ರಿಂದ ತೊರಿದ್ದಾರೆ ಎಂದು ಪತಿ ಆರೋಪಿಸಿ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಹೃದಯ ಸ್ತಂಭನದ ಆರಂಭಿಕ 5 ಲಕ್ಷಣಗಳಾವುವು? ಹೃದಯಾಘಾತವಾದಾಗ ಮೊದಲು ಏನು ಮಾಡಬೇಕು? heart-attack
ನನ್ನ ಪತ್ನಿ ನನ್ನ ತೊರೆದ ಮೇಲೆ ನನಗೆ ಬದುಕು ನಿರ್ವಹಣೆಗೆ ಕಷ್ಟವಾಗುತ್ತಿದೆ. ಹೀಗಾಗಿ, ಸೇವಕ್ ರಾಮ್ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಮ್ಮ ಪತ್ನಿಯಿಂದ ಮಾಸಿಕ 25,000 ರೂ. ಜೀವನಾಂಶ ನೀಡುವಂತೆ ಒತ್ತಾಯಿಸಿದ್ದಾರೆ. ನನಗೆ ಯಾವುದೇ ಆದಾಯದ ಮೂಲವಿಲ್ಲ ಎಂದು ಅವರು ಹೇಳುತ್ತಾರೆ, ಆದರೆ ವಿಚ್ಛೇದನವಿಲ್ಲದೆ ಐಷಾರಾಮಿ ಜೀವನ ನಡೆಸುತ್ತಿರುವ ನನ್ನ ಪತ್ನಿ ಪಿಂಚಣಿ ರೂಪದಲ್ಲಿ ಸಾವಿರಾರು ರೂಪಾಯಿಗಳನ್ನು ಗಳಿಸುತ್ತಿದ್ದಾರೆ ಎಂದಿದ್ದಾರೆ.
ನಾನೇ MLA ಮಾಡಿದ್ದು..!
ಸೋನಾ ಬಾಯಿ ರಾಜಕೀಯಕ್ಕೆ ಸೇರಲು ಪ್ರೇರೇಪಿಸಿದ್ದು ತಾನೇ ಎಂದು ಸೇವಕ್ ರಾಮ್ ಹೇಳಿಕೊಂಡಿದ್ದಾರೆ. ನನ್ನ ಪ್ರಯತ್ನದ ಫಲವಾಗಿ, 2003 ರಲ್ಲಿ, ಬಿಜೆಪಿ ಸೋನಾ ಬಾಯಿಗೆ ಟಿಕೆಟ್ ನೀಡಿತು ಮತ್ತು ಅವರು ಗೆದ್ದು ಶಾಸಕರಾದರು. ಆ ಸಮಯದಲ್ಲಿ, ಉಮಾ ಭಾರತಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು ಮತ್ತು ಸೋನಾ ಬಾಯಿ ಉಮಾ ಭಾರತಿಗೆ ಆಪ್ತರಾಗಿದ್ದರು ಎಂದು ಹೇಳಲಾಗಿದೆ.
ಅವರು ಅದಿನಿಂದ ನನಗೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಿದರು. ಅಂತಿಮವಾಗಿ 2009 ರಲ್ಲಿ ವಿಚ್ಛೇದನ ಪಡೆಯದೆ ಅವರನ್ನು ತೊರೆದರು. ಪ್ರಸ್ತುತ, ಸೋನಾ ಬಾಯಿ ಸಾಗರ್‌ನಲ್ಲಿ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದರೆ, ನಾನು ಜೀವನ ನಡೆಸಲು ಹೆಣಗಾಡುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಅರ್ಜಿ ಸ್ವೀಕರಿಸಿದ ಕೋರ್ಟ್
ನ್ಯಾಯಾಲಯವು ಅವರ ಅರ್ಜಿಯನ್ನು ಸ್ವೀಕರಿಸಿದ್ದು, ಮಾಜಿ ಶಾಸಕಿಗೆ ನೋಟಿಸ್ ನೀಡಲಾಗುವುದು ಸೇವಕ್ ರಾಮ್ ಅವರ ವಕೀಲ ನಿತಿನ್ ಮಿಶ್ರಾಹೇಳಿದರು. ಸೋನಾ ಬಾಯಿ ನ್ಯಾಯಾಲಯಕ್ಕೆ ಹಾಜರಾಗುವ ಮೂಲಕ ತಮ್ಮ ಪರವಾಗಿ ಹಾಜರುಪಡಿಸಬೇಕಾಗುತ್ತದೆ. ನಂತರ ನ್ಯಾಯಾಲಯವು ಎಷ್ಟು ಜೀವನಾಂಶವನ್ನು ನೀಡಲಾಗುತ್ತದೆ ಮತ್ತು ಯಾವ ಆಧಾರದ ಮೇಲೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಎಂದಿದ್ದಾರೆ.(ಏಜೆನ್ಸೀಸ್)
U-19 ಕ್ರಿಕೆಟ್ನಲ್ಲಿ ಇತಿಹಾಸ ಬರೆದ 14ರ ಪೋರ! 52 ಬಾಲ್ಗೆ ಶತಕ ಸಿಡಿದ ಸೂರ್ಯವಂಶಿ
ನನ್ನನ್ನು ಜೈಲಿಗೆ ಕಳುಹಿಸಿ ಎಂದು ಮರವೇರಿ ಕುಳಿತ ಯುವಕನ ರಂಪಾಟ! ಏನಿದು ವಿಚಿತ್ರ ಘಟನೆ? | Tree