ವಿಜಯಪುರ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹಿಂದಿನ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಮನೆ ಮೇಲೆ ಲೋಕಾಯುಕ್ತರು ಗುರುವಾರ ದಾಳಿ ನಡೆಸಿದರು.

ವಿಜಯಪುರದ ಚಾಲುಕ್ಯ ನಗರದ ಮನೆ ಮತ್ತು ಸೋಲಾಪುರ ನಗರದಲ್ಲಿರುವ ಮನೆ ಶೋಧನೆ ಕಾರ್ಯ ನಡೆಸಿದ್ದು, ಈ ವೇಳೆ 10 ಲಕ್ಷ ರೂಪಾಯಿ ನಗದು, ಬೆಳ್ಳಿ, ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳು ದೊರೆತಿವೆ. 2 ಕೋಟಿ ರೂ.ಗಳಿಗೂ ಅಧಿಕ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಸುರೇಶ ರೆಡ್ಡಿ, ಇನ್ಸಪೆಕ್ಟರ್ ಆನಂದ ವಿ. ಟಕ್ಕನ್ನವರ, ಆನಂದ ಡೋಣಿ ಮತ್ತಿತರರಿದ್ದರು.