18.1 C
Bangalore
Saturday, December 7, 2019

ಉತ್ತರ ಕರ್ನಾಟಕದ ಪ್ರವಾಹ ಮರೆತೇ ಬಿಟ್ಟಿರಾ?!: ವಿಶ್ವಗುರು ಅಂಕಣದಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ

Latest News

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಪತಿಯನ್ನು ಕೊಂದಿದ್ದ ಪತ್ನಿ, ಪ್ರಿಯಕರ ಬಂಧನ

ಬಾಗಲಕೋಟೆ: ಪತ್ನಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಆಕ್ರೋಶಗೊಂಡ ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ...

ಪ್ರಕೃತಿ ವಿಕೋಪವೆಂಬುದು ನಮ್ಮ ನಡುವಿನ ಬಾಂಧವ್ಯವನ್ನು ಹೆಚ್ಚು ಗಟ್ಟಿಗೊಳಿಸಬೇಕು. ಸಮಸ್ಯೆ ಬಂದಾಗ ಪರಿಹಾರಕ್ಕೆ ಹುಡುಕಾಡುವುದು ಅತ್ಯಂತ ಸಾಮಾನ್ಯರ ಲಕ್ಷಣ. ಆದರೆ ಸಮಸ್ಯೆ ಬರುವ ಮುನ್ನವೇ ಅದಕ್ಕೆ ಪರಿಹಾರ ಸಿದ್ಧ ಮಾಡಿಟ್ಟಿರುವುದು ಬುದ್ಧಿವಂತರ ನಡೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಸಮಸ್ಯೆ ಬರದೇ ಇರುವಂತೆ ತಡೆಯುವುದು ಶ್ರೇಷ್ಠರ ಲಕ್ಷಣ.

‘ಉತ್ತರ ಕರ್ನಾಟಕಕ್ಕೆ ಕಂಡು ಕೇಳರಿಯದ ಪ್ರವಾಹ ಬಂದಿತ್ತು’ ಎಂಬುದು ಹೆಚ್ಚು-ಕಡಿಮೆ ಮರೆತೇ ಹೋದ ಸಂಗತಿಯಾಗಿದೆ. ಸುಮಾರು ಹದಿನೈದಿಪ್ಪತ್ತು ದಿನಗಳ ಕಾಲ ಮುಖಪುಟದ ಸುದ್ದಿಯಾಗಿ ಮೆರೆದ ಪ್ರವಾಹ ಈಗ ಹೆಚ್ಚೂ-ಕಡಿಮೆ ಮಾಯವೇ ಆಗಿ ಹೋಗಿದೆ. ಹಾಗಂತ ಪ್ರವಾಹ ಪೀಡಿತರು ಹಳೆಯ ಬದುಕಿಗೆ ಮರಳಿದ್ದಾರಾ? ಉತ್ತರ ಹುಡುಕೋದು ಬಲು ಕಷ್ಟ. ಒಂದಂತೂ ಸತ್ಯ. ದಿನನಿತ್ಯದ ಅನ್ನದ ಸಮಸ್ಯೆ ಇದ್ದವನು ದೀರ್ಘಕಾಲ ಕೊಡುವವರ ಮುಂದೆ ಕೈಚಾಚಿ ಕುಳಿತುಕೊಳ್ಳಲಾರ. ಹೊಟ್ಟೆಯ ಸಂಕಟ ನೀಗಿಸಿಕೊಳ್ಳಲೆಂದು ಆತ ತನ್ನ ತಾನು ದುಡಿತಕ್ಕೆ ಒಡ್ಡಿಕೊಳ್ಳುತ್ತಾನೆ. ಈಗ ನೆರೆಯನ್ನು ಎಲ್ಲರೂ ಮರೆತಿರುವುದರಿಂದ ಒಂದಷ್ಟು ಸಂಗತಿ ಹಂಚಿಕೊಳ್ಳಲೇಬೇಕು. ಭೂಕಂಪ, ಪ್ರವಾಹ, ಬೆಂಕಿ ಅವಘಡ ಇವೆಲ್ಲವೂ ಮನುಷ್ಯನ ಬದುಕನ್ನು ಛಿದ್ರಗೊಳಿಸಿಬಿಡುತ್ತವೆ. ಜತನದಿಂದ ಕಟ್ಟಿಕೊಂಡು ಬಂದ ಮನೆ-ಮಠ ಹೊಲ-ಗದ್ದೆಗಳನ್ನೆಲ್ಲ ನೋಡಲೂ ಸಿಗದಂತೆ ಮಾಡಿಬಿಡುತ್ತದೆ. ಭುಜ್​ನ ಭೂಕಂಪವಾದ ಸ್ಥಳಕ್ಕೆ ಈಗ ಹೋದರೂ ಆ ವಿನಾಶದ ಒಂದು ತುಣುಕು ಖಂಡಿತ ನೋಡಸಿಗುತ್ತದೆ! ಪ್ರಕೃತಿಯನ್ನು ನಾವು ಶೋಷಿಸುತ್ತೇವೆ ನಿಜ, ಆದರೆ ಒಮ್ಮೆ ಅದು ಸಣ್ಣಗೆ ಕಂಪಿಸಿದರೂ ನಾವು ಬದುಕುವುದೇ ದುಸ್ಸಾಧ್ಯವಾಗಿಬಿಡುತ್ತದೆ. ಪ್ರಕೃತಿಗೆ ಬಡವ-ಸಿರಿವಂತನೆಂಬ ಭೇದವಿಲ್ಲವಾದ್ದು ನಿಜವಾದರೂ ಹಣವುಳ್ಳವನು ತನ್ನ ಜೀವನವನ್ನು ಬಲುಬೇಗ ಮರು ನಿರ್ವಿುಸಿಕೊಂಡುಬಿಡುತ್ತಾನೆ. ಬಡವನ ಕಥೆ ಅರಣ್ಯರೋದನ. ಆತನ ನೋವನ್ನು ಮುಂದಿರಿಸಿಕೊಂಡು ಶಕ್ತರು ಎಲ್ಲ ಅನುಕೂಲಗಳನ್ನೂ ಪಡೆದುಕೊಂಡುಬಿಡುತ್ತಾರೆ. ಈತ ಮಾತ್ರ ಈ ಎಲ್ಲ ದುಃಖಗಳಿಗೆ ರೂಪದರ್ಶಿಯಾಗಿ ನಿಂತುಬಿಡುತ್ತಾನೆ ಅಷ್ಟೇ!

ನಾವೂ ಹಾಗೆಯೇ. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಈ ಎಲ್ಲ ದುಃಖದ ಸುದ್ದಿ ಬರುವವರೆಗೂ ನಮ್ಮ ಮನಸ್ಸು ಸ್ಪಂದಿಸುತ್ತಿರುತ್ತದೆ. ಒಮ್ಮೆ ಮುಖ್ಯವಾಹಿನಿಗಳಲ್ಲಿ ಇವುಗಳು ಕಾಣೆಯಾದವೆಂದರೆ ನಮ್ಮ ಮನಸ್ಸಿನಲ್ಲೂ ಅವಕ್ಕೆ ಜಾಗವೇ ಇಲ್ಲ. ಹೀಗಾಗಿಯೇ ನೊಂದವರಿಗೆ ಪರಿಹಾರ ನೀಡುವ ಧಾವಂತ ಎಲ್ಲರಲ್ಲೂ ಆಕ್ಷಣದ ಉನ್ಮತ್ತತೆಯ ರೂಪದಲ್ಲಿ ಕಂಡು ಬರುತ್ತದಲ್ಲ, ಅದು ಮುಂದಿನ ಆರೆಂಟು ತಿಂಗಳುಗಳಿಗೆ ವಿಸ್ತಾರವಾಗಿಬಿಟ್ಟರೆ ಪರಿಹಾರ ನೀಡಲು ಸರ್ಕಾರವೇ ಬೇಕಾಗಿಲ್ಲ. ಉತ್ತರ ಕರ್ನಾಟಕದ ಪ್ರವಾಹದ ಹೊತ್ತಲ್ಲಿ ಎಲ್ಲರೂ ಎಷ್ಟು ಬೇಗಬೇಗನೇ ಪರಿಹಾರವನ್ನು ಕಳಿಸಿದ್ದರೆಂದರೆ ಸಿಕ್ಕವರಿಗೆ ಮತ್ತಷ್ಟು ಸಿಕ್ಕಿ, ಕೆಲವೊಂದು ವಸ್ತುಗಳ ಮೇಲೆ ಅವರಿಗೂ ವಾಕರಿಕೆ ಬಂದು, ಕೆಲವೊಮ್ಮೆ ಕೊಟ್ಟದ್ದನ್ನು ಬೇಡವೆನ್ನುತ್ತ, ಹೆಚ್ಚಿದ್ದುದನ್ನು ಮಾರಾಟ ಮಾಡುತ್ತ ಆರಂಭದ ದಿನಗಳನ್ನು ಕಳೆದುಬಿಟ್ಟರು! ಇವುಗಳ ನಡುವೆಯೇ ಹೀಗೆ ದೂರದಿಂದ ಬಂದ ವಸ್ತುಗಳನ್ನು ಒಂದೆಡೆ ಗುಡ್ಡೆ ಹಾಕಿ ಆನಂತರದ ದಿನಗಳಲ್ಲಿ ಅದನ್ನು ಮಾರಾಟ ಮಾಡಿಕೊಂಡ ಲೂಟಿಕೋರರೂ ನಮ್ಮ ನಡುವೆಯೇ ಇದ್ದಾರೆ.

ಸರ್ಕಾರ ಯಾವುದೇ ಇರಲಿ ಕೇಂದ್ರವಾಗಲಿ, ರಾಜ್ಯವೇ ಆಗಲಿ ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ತೋರಬೇಕಾದ ಅಗತ್ಯವಂತೂ ಖಂಡಿತ ಇದೆ. ಪ್ರಾಕೃತಿಕ ವಿಕೋಪದ ಹೊತ್ತಿನಲ್ಲಿ ಸಮಸ್ಯೆಗಳನ್ನು ನಿಭಾಯಿಸಲು ರಾಷ್ಟ್ರವಿನ್ನೂ ಸಮರ್ಥವಾಗಬೇಕಿದೆ. ಕುಳಿತಲ್ಲಿಂದ ಫ್ಲಿಪ್​ಕಾರ್ಟ್

ನಲ್ಲಿ ನಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತೇವೆ. ಬೇಕಾದ ಜಾಗದಿಂದ ಮತ್ತೆಲ್ಲಿಗೋ ಹೋಗಲು ಬೌನ್ಸ್ ಗಾಡಿಗಳನ್ನು ಬಳಸುವ ವ್ಯವಸ್ಥೆ ನಮಗಿದೆ. ಜಗತ್ತಿನ ಯಾವ ಮೂಲೆಗೆ ಬೇಕಿದ್ದರೂ ಸಂಪರ್ಕ ಸಾಧಿಸುವ ಶಕ್ತಿಯನ್ನೂ ಪಡೆದುಕೊಂಡಿದ್ದೇವೆ. ಆದರೆ, ಈ ರೀತಿಯ ವಿಕೋಪದ ಹೊತ್ತಲ್ಲಿ ಯಾರಿಗೆ ಏನಾಗಿದೆ, ಹಾನಿಯ ಪ್ರಮಾಣವೇನು, ತಕ್ಷಣಕ್ಕೆ ಮಾಡಬಹುದಾದುದೇನು ಎಂದು ತಿಳಿದುಕೊಳ್ಳುವ ವ್ಯವಸ್ಥೆ ರೂಪಿಸುವಲ್ಲಿ ಸೋತುಬಿಟ್ಟಿದ್ದೇವೆ. ಬೇರೆಲ್ಲ ವಿಕೋಪಗಳ ಬಗ್ಗೆ ಗೊತ್ತಿಲ್ಲ, ಆದರೆ ಈ ಬಾರಿಯ ಪ್ರವಾಹದ ಪರಿಸ್ಥಿತಿಯನ್ನಂತೂ ವ್ಯವಸ್ಥಿತವಾಗಿ ನಿಭಾಯಿಸುವುದು ಸಾಧ್ಯವಿತ್ತೇನೋ ಎನಿಸುತ್ತಿದೆ. ಏಕೆಂದರೆ ಪ್ರವಾಹ ಬರಬಹುದೆಂಬ ಮುನ್ಸೂಚನೆ ಖಂಡಿತವಾಗಿಯೂ ಎಲ್ಲರಿಗೂ ಇತ್ತು. ಹಂತ-ಹಂತವಾಗಿ ಅಣೆಕಟ್ಟುಗಳು ತುಂಬಿ ನೀರನ್ನು ಬಿಡುತ್ತಿರುವಾಗ ಅದು ಹರಿಯುವ ದಿಕ್ಕನ್ನು ಊಹಿಸುವುದು ಖಂಡಿತ ಸಾಧ್ಯವಿತ್ತು. ಆದರೆ ರಾಷ್ಟ್ರವಾಗಿ ಈ ವಿಚಾರದಲ್ಲಿ ನಾವು ಸೋತುಹೋದೆವು. ಹೋಗಲಿ ತೊಂದರೆಗೊಳಗಾದವರನ್ನು ಸೂಕ್ತವಾಗಿ ಗುರುತಿಸುವ ಪ್ರಯತ್ನ ಕೂಡ ಮಾಡಲಾಗಲಿಲ್ಲ. ಸರ್ಕಾರ ಬಿಡಿ, ಯಾವುದಾದರೂ ಊರಿಗೆ ನಾವುಗಳು ಹೋದಾಗಲೂ ಪರಿಹಾರ ಎಂಥವರಿಗೆ ಕೊಡಬೇಕೆಂಬುದನ್ನು ಊರಿನ ಪುಢಾರಿಯೇ ನಿಶ್ಚಯಿಸಿಬಿಟ್ಟಿರುತ್ತಿದ್ದ! ನಾವು ವ್ಯವಸ್ಥಿತವಾಗಿ ಅಧ್ಯಯನ ಮಾಡಿ ಸತ್ಪಾತ್ರರನ್ನು ಆಯ್ಕೆ ಮಾಡಿಕೊಂಡರಂತೂ ಆತನಿಗೆ ಕಂಠಮಟ್ಟ ಕೋಪ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತನಗೆ ಬೇಕಾದವರಿಗೆ ವಸ್ತು, ಹಣ, ಮನೆ ಮೊದಲಾದ ಪರಿಹಾರ ಕೊಡಿಸುವುದಕ್ಕೆ ಈ ನೆರೆ ಅವನ ಪಾಲಿಗೆ ಒಂದು ವರ. ತಂತ್ರಜ್ಞಾನದ ಮೂಲಕ ಇಂತಹ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಿದೆಯಾ ಎಂಬುದನ್ನು ಇಂದಿನ ತರುಣರು ಅಧ್ಯಯನ ಮಾಡಬೇಕಿದೆ. ವಿಕೋಪದ ಹೊತ್ತಲ್ಲಿ ಮೊಬೈಲ್ ಟವರ್​ಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತವೆ. ಆ ಹೊತ್ತಿನಲ್ಲಿ ಹೆಗಲ ಮೇಲೆ ಟವರ್ ಅನ್ನು ಹಾಕಿಕೊಂಡು ಜನರಿಗೆ ಸಂಪರ್ಕ ಕಲ್ಪಿಸಿಕೊಡಬಲ್ಲ ಅವಿಷ್ಕಾರವೇನಾದರೂ ಮಾಡಬಹುದೇ? ಗೂಗಲ್ ಮ್ಯಾಪ್​ಗಳು ಹೀಗೆ ಅಗಾಧವಾಗಿ ಬೆಳೆದಿರುವ ಕಾಲದಲ್ಲಿ ನಾವೇನಾದರೂ ಆದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಆಯಾ ವ್ಯಕ್ತಿಗಳಿಗೆ, ಊರಿಗೆ ಸಲ್ಲುವಂತೆ ಮಾಡಬಹುದೇ? ಕೊನೆಗೆ ಆನ್​ಲೈನ್ ಡಾಟಾಬೇಸ್ ಒಂದನ್ನು ನಿರ್ವಿುಸಿ ಯಾವ ಹಳ್ಳಿಯಲ್ಲಿ ಎಷ್ಟು ಜನಕ್ಕೆ ಸಮಸ್ಯೆಯಾಗಿದೆ ಎಂಬ ವಿವರವನ್ನು ಸಾರ್ವಜನಿಕವಾಗಿಸಿ ಆಯಾ ಊರಿಗೆ ಸಹಾಯ ಮಾಡಲು ಒಪ್ಪಿಕೊಂಡ ಸ್ವಯಂಸೇವಾ ಸಂಸ್ಥೆಗಳ ಉಲ್ಲೇಖವನ್ನೂ ಮಾಡಿಬಿಟ್ಟರೆ ಎಲ್ಲರೂ ಒಂದೇ ಕಡೆ ಧಾವಿಸುವುದು ತಪ್ಪುತ್ತದಲ್ಲಾ? ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಬಗೆಯ ವಿಪತ್ತು ನಿರ್ವಹಣೆಯ ಪ್ರಾಜೆಕ್ಟ್​ಗಳನ್ನು ಮಕ್ಕಳ ಬಳಿ ಮಾಡಿಸಿದರೆ ಖಂಡಿತ ಅದು ರಾಷ್ಟ್ರಕ್ಕೆ ಒಳಿತಾಗಲಿದೆ. ಮೊನ್ನೆ ಯುವಾಬ್ರಿಗೇಡ್ ಬೆಳಗಾವಿಯಲ್ಲಿ ಆಯೋಜಿಸಿದ್ದ ‘ಫಿಫ್ತ್ ಪಿಲ್ಲರ್’ ಕಾರ್ಯಕ್ರಮದಲ್ಲಿ ಈ ಬಗೆಯ ಅನೇಕ ಚರ್ಚೆಗಳು ಅನೌಪಚಾರಿಕವಾಗಿ ಬಂದವು.

ಒಂದೆಡೆ ವಿಪತ್ತುಗಳ ನಿರ್ವಹಣೆಗೆ ತಂತ್ರಜ್ಞಾನ ಬಳಸಬೇಕು ಎನ್ನುವುದಾದರೆ, ಮತ್ತೊಂದೆಡೆ ನೋವಿನಲ್ಲಿದ್ದವರಿಗೆ ದೀರ್ಘಕಾಲದ ಪರಿಹಾರಕ್ಕೆ ನಾವು ಆಲೋಚಿಸಬೇಕೆಂಬುದೂ ಸತ್ಯ. ಶಿವಮೊಗ್ಗದಲ್ಲಿ ಪ್ರವಾಹದ ಹೊಡೆತಕ್ಕೆ ಗುಡಿಸಲನ್ನು ಕಳೆದುಕೊಂಡ ವೃದ್ಧದಂಪತಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಸರ್ಕಾರದಿಂದ ಮನೆ ನಿರ್ವಣಗೊಳ್ಳುವವರೆಗೂ ಅವರು ದೇವಸ್ಥಾನದಿಂದ ಹೊರಬರುವಂತಿರಲಿಲ್ಲ. ಪ್ರವಾಹ ಕಳೆದು ಎರಡು ತಿಂಗಳಾಗಿದೆ ಸರಿ. ಆದರೆ ಹೀಗೆಯೇ ಒಂದು ದೇವಸ್ಥಾನವಾದರೂ ವೃದ್ಧರಿಬ್ಬರಿಗೆ ಎಷ್ಟು ದಿನಗಳ ಕಾಲ ಅನ್ನ ಕೊಟ್ಟೀತು ಹೇಳಿ? ಹೋಗಲಿ ಹೀಗೆ ಮನೆ ಕಳಕೊಂಡ ಎಷ್ಟು ಜನಕ್ಕೆ ಸರ್ಕಾರವಾದರೂ ಮರು ಮನೆ ನಿರ್ಮಾಣ ಮಾಡೀತು ಹೇಳಿ? ಹೀಗಾಗಿ ಅರ್ಹರನ್ನು ಗುರುತಿಸಿ ಅಲ್ಲೊಂದು ಇಲ್ಲೊಂದಾದರೂ ಮನೆನಿರ್ವಣ ಮಾಡಬೇಕೆಂಬ ಸಂಕಲ್ಪವನ್ನು ನಾಡಿನ ಕೆಲವು ತರುಣ-ತರುಣಿಯರು ಮಾಡಿದ್ದು ಹೆಮ್ಮೆಯ ಸಂಗತಿಯೇ. ಬೆಳಗಾವಿಯ ಮೀರಮ್ಮ ಬಾಗ್​ಬಾನ್ ಎಂಬ ಅಜ್ಜಿ ತನ್ನ ಮನೆಯನ್ನು ಪೂರ್ಣ ಕಳೆದುಕೊಂಡು ಬೀದಿಗೆ ಬಂದುಬಿಟ್ಟಿದ್ದರು. ತನ್ನನ್ನು ನೋಡಿಕೊಳ್ಳಬಲ್ಲ ವ್ಯಕ್ತಿಗಳೂ ಯಾರೂ ಇಲ್ಲದ್ದರಿಂದ ಆಕೆಯೂ ಅಸಹಾಯಕಳೇ ಆಗಿದ್ದಳು. ಆಕೆಗೊಂದು ಸೂರು ನಿರ್ವಿುಸಿಕೊಡುವ ಇಚ್ಛೆ ವ್ಯಕ್ತವಾದಾಗ ವೀಣಾ ಬನ್ನಂಜೆ ಮತ್ತವರ ಗೆಳೆಯರ ಬಳಗ ಬಲು ಆಸ್ಥೆಯಿಂದ ಜೊತೆಗೆ ನಿಂತಿತು. ಈಗಾಗಲೇ ಅಲ್ಲಿ ಈ ಕುರಿತ ಕೆಲಸ ಆರಂಭವಾಗಿದೆ. ಬಹುಶಃ ಇನ್ನು ಕೆಲವು ದಿನಗಳಲ್ಲಿ ಮನೆಯೂ ಪೂರ್ಣಗೊಂಡುಬಿಡುತ್ತದೆ. ಇತ್ತ ನಂಜನಗೂಡಿನಲ್ಲಿ ಕಪಿಲೆ ಉಕ್ಕಿ ಮನೆಗೆ ನುಗ್ಗಿದಾಗ ಅನೇಕರು ಗಾಬರಿಗೊಂಡಿದ್ದರು. ಆದರೆ ನೀರಿಳಿಯುತ್ತಿದ್ದಂತೆ ಬದುಕು ಸಹಜ ಸ್ಥಿತಿಗೆ ಮರಳಿತು. ಈ ಹೊತ್ತಲ್ಲಿ ಮನೆ ಕಳೆದುಕೊಂಡ ಒಂದು ಕುಟುಂಬ ಮಾತ್ರ ಹಳಿಗೆ ಮರಳಲೇ ಇಲ್ಲ! ಊರಿನ ಜನರ ನೋವನ್ನು ಆ ಊರಿನ ಜನರಲ್ಲದೇ ಮತ್ಯಾರು ಪರಿಹರಿಸಬೇಕು ಹೇಳಿ? ಹೀಗಾಗಿ ಅಲ್ಲಿನ ಯುವಾಬ್ರಿಗೇಡ್ ತಂಡ ದಾನಿಗಳನ್ನು ಜೊತೆಗೂಡಿಸಿಕೊಂಡು ಮನೆನಿರ್ವಣ ಮಾಡಿಯೇಬಿಟ್ಟಿತು. ಈ ತಿಂಗಳ ಕೊನೆಯ ವೇಳೆಗೆ ಬಣ್ಣ ಬಳಿದು ನೆಲ ಹಾಸಿ ಆ ಮನೆಯನ್ನು ಹಸ್ತಾಂತರಿಸುತ್ತಿದ್ದಾರೆ. ಇವುಗಳೊಟ್ಟಿಗೆ ಮೊನ್ನೆ ನವೆಂಬರ್ 15ಕ್ಕೆ ಶಿವಮೊಗ್ಗದಲ್ಲಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ವೃದ್ಧದಂಪತಿಗೆ ಮನೆ ನಿರ್ವಿುಸಿ ಹಸ್ತಾಂತರಿಸಿಯೂ ಆಯ್ತು. ಆ ವೃದ್ಧ ದಂಪತಿಗಳನ್ನು ಆಯ್ಕೆ ಮಾಡಿದ್ದು ಅಲ್ಲಿನ ಸೋದರಿ ನಿವೇದಿತಾ ಪ್ರತಿಷ್ಠಾನದ ಒಂದಷ್ಟು ತಾಯಂದಿರು. ಅವರನ್ನು ಕಂಡು, ಇತರರ ಸಹಕಾರವಿಲ್ಲದೆ ಬಹುಶಃ ಜೀವನದಲ್ಲಿ ಮನೆ ಕಟ್ಟಿಕೊಳ್ಳುವುದು ಅವರಿಗೆ ಸಾಧ್ಯವೇ ಇಲ್ಲ ಎಂದು ಗುರುತಿಸಿದ ಈ ಪಡೆ ಸರ್ಕಾರದ ಸಹಕಾರಕ್ಕೆ ಕಾಯದೇ ತಾನೇ ಮನೆಕಟ್ಟಿಕೊಡುವ ನಿಶ್ಚಯ ಮಾಡಿತು! ಅದಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದ್ದು ತುಮಕೂರಿನ ಸಹಕಾರ ಫೌಂಡೇಶನ್ ಎಂಬ ವಿದ್ಯಾರ್ಥಿಗಳ ಪಡೆ. ಸಮಾಜಕ್ಕೇನಾದರೂ ಮಾಡಬೇಕಂಬ ತುಡಿತವುಳ್ಳ ಈ ತರುಣ-ತರುಣಿಯರು ತಾವು ಸಂಗ್ರಹಿಸಿದ ಒಂದಿಷ್ಟು ಹಣವನ್ನು ಈ ಮನೆನಿರ್ವಣಕ್ಕೆಂದು ಕಳಿಸಿಕೊಟ್ಟರು. ಸ್ಥಳೀಯರಿಂದ ವಸ್ತು ಮತ್ತು ಹಣದ ರೂಪದಲ್ಲಿ ದಾನವನ್ನು ಸಂಗ್ರಹಿಸಿ ಒಂದೂವರೆ ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಸುಂದರವಾದ ಮತ್ತು ಸರ್ವಸಜ್ಜಿತವಾದ ಮನೆಯನ್ನು ನಿರ್ವಿುಸಿ ‘ನಮ್ಮನೆ’ ಎಂದು ಹೆಸರಿಟ್ಟು ಅವರಿಗೆ ಕೊಡಲಾಯ್ತು. ಆ ಮನೆಯ ಒಳಕ್ಕೆ ಆ ವೃದ್ಧ ದಂಪತಿ ಹೋಗುವಾಗ ಅವರ ಕಂಗಳಲ್ಲಾಡಿದ ನೀರು ಕಣ್ಣಿಗೆ ಕಟ್ಟಿದಂತಿದೆ!

ಬರೀ ಇಷ್ಟೇ ಅಲ್ಲ. ಈ ಎರಡೂ ಸಂಘಟನೆಗಳು ನೊಂದವರಿಗೆ ಸಹಾಯ ಮಾಡಲೆಂದು 200ಕ್ಕೂ ಹೆಚ್ಚು ಪರಿವಾರಗಳನ್ನು ದಾನಿಗಳೊಂದಿಗೆ ನೇರಸಂಪರ್ಕ ಮಾಡಿಕೊಟ್ಟಿವೆ. ಪ್ರತೀ ತಿಂಗಳು 10,000 ರೂಪಾಯಿಯಂತೆ 6 ತಿಂಗಳಕಾಲ ದಾನಿಗಳೇ ನೇರವಾಗಿ ನೊಂದವರ ಅಕೌಂಟಿಗೆ ವರ್ಗಾಯಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಇದರ ಲಾಭವೇನು ಗೊತ್ತೇ? ದಾನಿಗಳು ಆ ಕುಟುಂಬಗಳೊಂದಿಗೆ ಸಂಪರ್ಕವಿರಿಸಿಕೊಳ್ಳುವುದಲ್ಲದೆ ಆ ಪರಿವಾರದ ಭವಿಷ್ಯದ ದುಃಖಕ್ಕೂ ಪರಿಹಾರವಾಗಿ ನಿಲ್ಲುತ್ತಾರೆ. ಮತ್ತು ಅವರು ಈ ಹೊತ್ತಿನಲ್ಲಿ ಕೊಟ್ಟ ಹಣ ಬದುಕನ್ನು ಪುನರ್​ರೂಪಿಸಿಕೊಳ್ಳುವುದಕ್ಕೂ ಸಾಕಷ್ಟು ಸಹಾಯ ಮಾಡುತ್ತದೆ. ಶಿವಮೊಗ್ಗದಲ್ಲಿ ಪೊರಕೆ ತಯಾರಿಸಿ ಮಾರುತ್ತಿದ್ದ ವ್ಯಕ್ತಿಯೊಬ್ಬ ಪ್ರವಾಹದಲ್ಲಿ ಎಲ್ಲವನ್ನೂ ಕಳಕೊಂಡನಲ್ಲ, ಹೀಗೆ ಸಿಕ್ಕ ಹಣದಿಂದ ಆತ ಬದುಕನ್ನೇ ಪುನರ್​ರೂಪಿಸಿಕೊಂಡಿದ್ದಾನೆ. ದುಃಖದ ಹೊತ್ತಿನಲ್ಲಿ ಕೈ ಹಿಡಿದ ಆ ಪರಿವಾರದ ಕುರಿತಂತೆ ಆತನ ಕೃತಜ್ಞತೆ ಬಣ್ಣಿಸಲಸದಳವಾದ್ದು. ಮೊನ್ನೆಗೆ ಅನೇಕರಿಗೆ ನಾಲ್ಕನೇ ತಿಂಗಳ ಕಂತೂ ಸೇರಿದೆ. ಇನ್ನೆರಡು ತಿಂಗಳ ಕಂತು ಸೇರಿದರೆ ಕೊಡುವವರ ಒಪ್ಪಂದ ಮುಗಿದಂತೆ. ಆದರೆ ಪ್ರೀತಿ ಮುಗಿಯಲಾರದ್ದು! ಈ ಹಿನ್ನೆಲೆಯಲ್ಲಿಯೇ ಪ್ರಕೃತಿ ವಿಕೋಪವೆಂಬುದು ನಮ್ಮ ನಡುವಿನ ಬಾಂಧವ್ಯವನ್ನು ಹೆಚ್ಚು ಗಟ್ಟಿಗೊಳಿಸಬೇಕು ಎಂದು ನಾವೆಲ್ಲ ಭಾವಿಸೋದು.

ಸಮಸ್ಯೆ ಬಂದಾಗ ಪರಿಹಾರಕ್ಕೆ ಹುಡುಕಾಡುವುದು ಅತ್ಯಂತ ಸಾಮಾನ್ಯರ ಲಕ್ಷಣ. ಆದರೆ ಸಮಸ್ಯೆ ಬರುವ ಮುನ್ನವೇ ಅದಕ್ಕೆ ಪರಿಹಾರ ಸಿದ್ಧ ಮಾಡಿಟ್ಟಿರುವುದು ಬುದ್ಧಿವಂತರ ನಡೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಸಮಸ್ಯೆ ಬರದೇ ಇರುವಂತೆ ತಡೆಯುವುದು ಶ್ರೇಷ್ಠರ ಲಕ್ಷಣ. ನಾವೀಗ ಮೊದಲನೇ ಯಾದಿಯಲ್ಲಿದ್ದೇವೆ. ಸ್ವಲ್ಪ ತಂತ್ರಜ್ಞಾನವನ್ನು ಬಳಸಿಕೊಂಡರೆ ಎರಡನೇ ಪಟ್ಟಿಗೆ ಸೇರುತ್ತೇವೆ. ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುವ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಶ್ರೇಷ್ಠರ ಪಟ್ಟಿಯಲ್ಲಿ ನಾವೂ ಒಬ್ಬರಾಗುತ್ತೇವೆ!

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...