ಬೆಂಗಳೂರು: ಅರಣ್ಯ ಸಂರಕ್ಷಣಾಧಿಕಾರಿಗಳ ತರಬೇತಿಗೆ ರಾಜ್ಯ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ತರಬೇತಿ ಪೂರ್ಣಗೊಳಿಸಿ ಸೇವೆಗೆ ವಾಪಸ್ಸಾದ ಅಂತಹ ಅಧಿಕಾರಿಗಳಿಗೆ ಕ್ಷೇತ್ರದ ಕಾರ್ಯದ ಹೊಣೆ ಒಪ್ಪಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ತೀರ್ಮಾನಿಸಿದ್ದಾರೆ.

ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಟಿಪ್ಪಣಿ ರವಾನಿಸಿರುವ ಸಚಿವರು, ಈ ಬಾರಿ ಸಾರ್ವತ್ರಿಕ ವರ್ಗಾವಣೆಯ ವೇಳೆ ವನ್ಯಜೀವಿ ನಿರ್ವಹಣೆಯ ತರಬೇತಿ ಪಡೆದ ಅಧಿಕಾರಿಗಳನ್ನು ವನ್ಯಜೀವಿ ವಿಭಾಗಕ್ಕೆ ನಿಯುಕ್ತಿಗೊಳಿಸಲು ಸೂಚಿಸಿದ್ದಾರೆ.
ಇಲಾಖೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವನ್ಯಜೀವಿ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿಯಿಂದ ಹಿಂತಿರುಗಿದ ಬಳಿಕ ಇಲಾಖೆಯ ಕಚೇರಿ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿದೆ.
ತರಬೇತಿ ಉದ್ದೇಶ ಈಡೇರಲು, ಸರ್ಕಾರದ ಹಣ ಬಳಕೆ ಪ್ರಯೋಜನದ ದೃಷ್ಟಿಯಿಂದ ಇಂತಹ ಅಧಿಕಾರಿಗಳನ್ನು ವನ್ಯಜೀವಿ ವಿಭಾಗಕ್ಕೆ ನಿಯೋಜಿಸುವುದು ಸೂಕ್ತ. ಇದರಿಂದ ಮಾನವ-ಪ್ರಾಣಿ ಸಂಘರ್ಷ, ಕಳ್ಳಬೇಟೆ ನಿಯಂತ್ರಣ ಮತ್ತು ವನ್ಯಜೀವಿಗಳ ಸಂತತಿ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದರು.
ಈ ಸಲಹೆಗೆ ತಕ್ಷಣ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ, ಡಿಸಿಎ್/ಡಿಎ್ಒ ಹಾಗೂ ಎಸಿಎ್ಗಳು ವನ್ಯಜೀವಿ ವಿಭಾಗದಲ್ಲಿ ಇರುವುದೇ ಸೂಕ್ತ. ಸಾರ್ವತ್ರಿಕ ವರ್ಗಾವಣೆ ವೇಳೆ ಇಂತಹ ಅಧಿಕಾರಿಗಳಿಗೆ ಕಚೇರಿ ಹುದ್ದೆಗಳ ಬದಲು ವನ್ಯಜೀವಿ ವಿಭಾಗಗಳಿಗೆ ವರ್ಗಾವಣೆಗೆ ಪರಿಗಣಿಸಲು ನಿರ್ದೇಶಿಸಿದ್ದಾರೆ.
ಹಸಿರು ಆವರಣ ತಾಣ
ತಜ್ಞರು ಹಾಗೂ ಪರಿಸರ ಪ್ರೇಮಿಗಳು ನೀಡಿದ ಮತ್ತೊಂದು ಸಲಹೆಗೂ ಈಶ್ವರ ಖಂಡ್ರೆ ಸಕಾರಾತ್ಮಕವಾಗಿ ಸ್ಪಂದಿಸಿ, ಬೆಂಗಳೂರು ವಿಶ್ವವಿದ್ಯಾಲಯ-ಜ್ಞಾನ ಭಾರತಿ ಆವರಣದಲ್ಲಿರುವ ಲಕ್ಷಾಂತರ ಮರಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಮುಂದಾಗಿದ್ದಾರೆ.
ಜೀವ ವೈವಿಧ್ಯ ಕಾಯ್ದೆಯಡಿ ಬೆಂಗಳೂರು ವಿಶ್ವವಿದ್ಯಾಲಯ-ಜ್ಞಾನಭಾರತಿ ಆವರಣವನ್ನು ಹಸಿರು ಪಾರಂಪರಿಕ ತಾಣವೆಂದು ೋಷಿಸಲು ಸಾಧ್ಯವಿದ್ದಲ್ಲಿ, ಪ್ರಸ್ತಾವನೆಯನ್ನು ಸಲ್ಲಿಸಲು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.