17.8 C
Bengaluru
Wednesday, January 22, 2020

ಆನೆ ದಾಳಿಗೆ ಬೆಳೆಗಾರ ಕಂಗಾಲು

Latest News

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು....

ಚಿಕ್ಕಮಗಳೂರು: ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಮಿತಿಮೀರಿದೆ. ಇವುಗಳಿಂದ ಬೆಳೆಯನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲು.

ಕಾಫಿ ತೋಟಗಳಿಗೆ ದಾಳಿ ನಡೆಸುವ ಕಾಡಾನೆಗಳು ಗಿಡಗಳ ನಡುವೆ ಒಮ್ಮೆ ರಭಸದಿಂದ ನುಸುಳಿದರೆ ಫಸಲು ಮಾತ್ರವಲ್ಲ, ರೆಂಬೆಗಳು ಮುರಿದುಬೀಳುತ್ತವೆ. ಹಲವು ವರ್ಷಗಳಿಂದ ಸಾಕಿದ ಗಿಡಗಳು ಕ್ಷಣ ಮಾತ್ರದಲ್ಲಿ ನಾಶವಾಗುತ್ತವೆ. ಕಾಡುಕೋಣಗಳು ಸಹ ತೋಟಗಳಿಗೆ ಮಾರಕವಾಗಿದ್ದರೂ ಆನೆಗಳಷ್ಟು ಉಪಟಳ ಇವುಗಳಿಂದಿಲ್ಲ.

ಅತಿವೃಷ್ಟಿಯಿಂದ ಗುಡ್ಡ ಕುಸಿದು ಅರಣ್ಯದಲ್ಲಿ ಮೇವು, ನೀರು ಕಡಿಮೆಯಾಗಿರುವ ಈ ಸಂದರ್ಭ ತೋಟಗಳಲ್ಲಿ ಹುಲುಸಾಗಿ ಬೆಳೆದಿರುವ ಬಾಳೆ, ತೆಂಗು, ಅಡಕೆ ಮಾತ್ರವಲ್ಲದೆ ಮೇವು, ಹಲಸಿನ ಹಣ್ಣುಗಳಿಗೆ ಕಾಡಾನೆಗಳು ಹೆಚ್ಚು ಆಕರ್ಷಿತವಾಗುತ್ತವೆ. ಹೀಗಾಗಿ ಬೆಳೆಗಾರರು ಎಚ್ಚೆತ್ತುಕೊಂಡು ತೋಟಗಳಲ್ಲಿ ಹಲಸಿನ ಕಾಯಿಗಳು ಹಣ್ಣಾಗುವ ಮೊದಲೇ ಅವುಗಳನ್ನು ಕಿತ್ತೆಸೆಯುವುದನ್ನು ರೂಢಿಸಿಕೊಂಡಿದ್ದಾರೆ. ಜತೆಗೆ ಸಹಜವಾಗಿ ಬೆಳೆಯುವ ಬೈನೆ ಮರಗಳು ಸಹ ಅವುಗಳಿಗೆ ಉತ್ತಮ ಆಹಾರ. ಒಮ್ಮೆ ತಿಂದರೆ ಕಾಡಾನೆಗಳ ಹಿಂಡು ಪದೇಪದೆ ತೋಟಗಳಿಗೆ ಲಗ್ಗೆ ಇಡುತ್ತದೆ.

ತೋಟಗಳಿಗೆ ದಾಳಿ ನಡೆಸುವ ಆನೆಗಳು ವಾರ, ತಿಂಗಳು ಕಳೆದರೂ ತೋಟ ಬಿಟ್ಟು ಕದಲುವುದೇ ಇಲ್ಲ. ಹಾಗಾಗಿ ಕಾರ್ವಿುಕರು ಕೂಡ ಕೆಲಸಕ್ಕೆ ಬರಲು ಭಯಪಡುತ್ತಾರೆ. ಪೇಟೆ, ಪಟ್ಟಣಗಳಿಗೆ ಸಾಗುವ ಕಾರ್ವಿುಕರು, ವಿದ್ಯಾರ್ಥಿಗಳು ಆತಂಕದಲ್ಲೇ ಓಡಾಡುವ ಪರಿಸ್ಥಿತಿ ಇದೆ.

ಮಲೆನಾಡಿನ ಬಹುತೇಕ ಮನೆಗಳ ಎದುರು ಹಲಸು, ಮಾವು, ಅತ್ತಿ ಮರಗಳಿರುತ್ತವೆ. ಮನೆ ಕಟ್ಟುವವರು ಕೂಡ ಇವುಗಳನ್ನು ಬೆಳೆಸುತ್ತಾರೆ. ಬೆಳೆದು ದೊಡ್ಡದಾದ ಮೇಲೆ ಇವುಗಳನ್ನು ತಿನ್ನಲು ಆನೆಗಳ ದಾಳಿ ಮಾಡುವುದು ಸಹಜ.

18 ವರ್ಷದಲ್ಲಿ 60 ಜನರ ಸಾವು: ಆನೆ ದಾಳಿಯಿಂದಾಗಿ 2000ದಿಂದ 2018ರವರೆಗೆ 60 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಬೆಳೆ ನಷ್ಟಕ್ಕೆ 9 ಕೋಟಿ ರೂ. ಪರಿಹಾರ ನೀಡಲಾಗಿದೆ. 2000ದಿಂದ 37 ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಿದ್ದರೆ, 2013ರಿಂದ 2015ರವರೆಗಿನ ಅವಧಿಯಲ್ಲಿ 22 ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ. ಹಾಸನ ಜಿಲ್ಲೆಯೊಂದರಲ್ಲೇ ಸುಮಾರು 57 ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಹಾಗೆಯೇ ವಿವಿಧ ಕಾರಣಕ್ಕೆ 2007ರಿಂದ 2018ರವರೆಗೆ 22 ಕಾಡಾನೆಗಳು ಸಾವಿಗೀಡಾಗಿವೆ. ಜನವಸತಿ ಇರುವ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಎಲ್ಲ ಕಾಡಾನೆಗಳನ್ನೂ ಸ್ಥಳಾಂತರಿಸಬೇಕು ಎಂದು ಸರ್ಕಾರದ ಮುಂದೆ ಕರ್ನಾಟಕ ಬೆಳೆಗಾರರ ಒಕ್ಕೂಟ ಬೇಡಿಕೆ ಇಟ್ಟಿದೆ. ಸ್ಥಳಾಂತರ ಆಗುವವರೆಗೂ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು. ಸುಮಾರು 11,250 ಎಕರೆ ವಿಸ್ತೀರ್ಣದ ಕುದುರೆಮುಖ ಅರಣ್ಯ ಪ್ರದೇಶ ಎಲ್ಲ ಆನೆಗಳ ಸ್ಥಳಾಂತರಕ್ಕೆ ಸೂಕ್ತ ಎಂದು ಕೆಜಿಎಫ್ ಅಭಿಪ್ರಾಯಪಟ್ಟಿದೆ.

ತಡೆ ಬೇಲೆ ನಿರ್ವಣಕ್ಕೆ ಸಲಹೆ: ಸ್ಥಳಾಂತರಗೊಂಡ ಕಾಡಾನೆಗಳು ಮರಳಿ ನಾಡಿನತ್ತ ಬರುವಂತಿರಬಾರದು. ರೈಲ್ವೆ ಹಳಿಗಳನ್ನು ಬಳಸಿ ತಡೆಬೇಲಿ ನಿರ್ವಿುಸುವುದರಿಂದ ಅವುಗಳ ನುಸುಳುವಿಕೆ ತಡೆಯಬಹುದು. 450 ಕಿ.ಮೀ.ಗೆ 750 ಕೋಟಿ ರೂ. ವೆಚ್ಚ ಮಾಡಿದಲ್ಲಿ ಈ ಕಾರ್ಯ ಪೂರ್ಣಗೊಳಿಸಬಹುದು ಎಂದು ಕೆಜಿಎಫ್ ಒಂದು ಅಂದಾಜು ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಬಾಳುಪೇಟೆ-ಸಕಲೇಶಪುರ ಸುತ್ತಮುತ್ತ ವನ್ಯಜೀವಿ ಉಪವಿಭಾಗವನ್ನು ವಿಶೇಷ ವಲಯವನ್ನಾಗಿ ರೂಪಿಸಬೇಕು. ಗಣತಿಯ ಪ್ರತಿಶತ 25 ಕಾಡಾನೆಗಳಿಗೆ ಕಾಲರ್ ಐ.ಡಿ. ಅಳವಡಿಸಬೇಕು. ಪ್ರಸ್ತುತ ಇರುವ ಕಾರ್ಯಪಡೆ ಜತೆಗೆ ಹೆಚ್ಚುವರಿ ಟಾಸ್ಕ್​ಫೋರ್ಸ್ ರಚಿಸಲು ಕ್ರಮ ಕೈಗೊಂಡು ಇನ್ನಷ್ಟು ಬಲ ಹೆಚ್ಚಿಸಬೇಕು. ಕಾಡಾನೆ ಹಾವಳಿ ವಿಚಾರದಲ್ಲಿ ಸರ್ಕಾರ ಅನುಕಂಪದ ಪರಿಹಾರ ಒದಗಿಸುವುದಲ್ಲ. ಈ ಪರಿಹಾರ ವೈಜ್ಞಾನಿಕವಾಗಿರಬೇಕು ಎಂದೂ ಕೆಜಿಎಫ್ ಒತ್ತಾಯಿಸಿದೆ.

3 ಜಿಲ್ಲೆಯಲ್ಲಿ 35 ಬೆಳೆಗಾರರ ಆತ್ಮಹತ್ಯೆ: ರೈತರು ಮಾತ್ರವಲ್ಲ ಬೆಳೆಹಾನಿ ಕಾರಣದಿಂದ ಸಾಲ ಮರುಪಾವತಿಸಲಾಗದೆ ಕಳೆದೆರಡು ವರ್ಷಗಳಲ್ಲಿ ಮೂರೂ ಜಿಲ್ಲೆಗಳ 35 ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಲು ಸಾಲ ಪಡೆದವರು ಅದನ್ನು ತೀರಿಸಲಾಗದೆ ಪ್ರಾಣ ಕಳೆದುಕೊಳ್ಳುವಂತಾಗಿದೆ. ಅದೆಷ್ಟು ಕಾಫಿ ತೋಟವಿದ್ದರೇನು? ಎಷ್ಟು ಕಾಫಿ ಬೆಳೆದರೇನು? ಹವಾಮಾನ ವೈಪರೀತ್ಯದಿಂದ, ಸರ್ಕಾರದ ಸಹಕಾರವೂ ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ರಾಜ್ಯದ್ದೇ ಸಿಂಹಪಾಲು: ಕೇರಳ, ತಮಿಳುನಾಡು, ಒಡಿಶಾ, ಆಂಧ್ರಪ್ರದೇಶ ಸೇರಿ 3.50 ಲಕ್ಷ ಮೆಟ್ರಿಕ್ ಟನ್ ಕಾಫಿ ಬೆಳೆಯುವ ದೇಶದ ಒಟ್ಟು ಉತ್ಪನ್ನದಲ್ಲಿ ಕರ್ನಾಟಕದ್ದೇ ಸಿಂಹಪಾಲು. ಅಂದರೆ ಶೇ.70ರಷ್ಟು ಕಾಫಿಯನ್ನು ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳೇ ಬೆಳೆಯುತ್ತಿವೆ.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...